ಮೈಸೂರು

ಜಿಲ್ಲೆಯಾದ್ಯಂತ ಇರುವ 49 ಚೆಕ್ ಪೋಸ್ಟ್ ಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಸ್ ಎಸ್ ಬಿ ಪೋಲೀಸರು

ಮೈಸೂರು,ಏ.21:- ಕೇಂದ್ರ ಎಸ್ ಎಸ್ ಬಿ ಪೋಲಿಸರು ಟ್ರೈನಿಂಗ್ ಮುಗಿಸಿ ಫಿಲ್ಡ್ ಗಿಳಿದಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ಇರುವ 49 ಚೆಕ್ ಪೋಸ್ಟ್ ಗಳಲ್ಲೂ ಎಸ್ ಎಸ್ ಬಿ ಪೋಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಂದೊಂದು ಚೆಕ್ ಪೋಸ್ಟ್ ನಲ್ಲಿ ಮೂವರು ಗಸ್ತು ತಿರುಗುತ್ತಿದ್ದು, ಕೇಂದ್ರ ಪೋಲಿಸರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳು ಒಂದೊಂದು ವಾಹನಗಳನ್ನು ತೀವ್ರ ತಪಾಸಣೆ ಮಾಡುತ್ತಿದ್ದಾರೆ. 24 ತಾಸುಗಳ ಸಮಯದಲ್ಲಿ ವಾಹನಗಳನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಾಹನಗಳ ತಪಾಸಣೆ ತೀವ್ರವಾಗಿಯೇ ನಡೆಯುತ್ತಿದೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: