ಮೈಸೂರು

ಗಂಧದ ಮರ ಕಳುವು ಮಾಡಿದ್ದ ಆರೋಪಿಗೆ 6 ವರ್ಷ ಜೈಲು ಶಿಕ್ಷೆ

ಗಂಧದ ಮರ ಕಳ್ಳತನ ಮಾಡಿದ್ದ ವ್ಯಕ್ತಿಗೆ ನಗರದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ  ತೀರ್ಪು ನೀಡಿದೆ.

ನಗರದ ಸಮೀರ್ ಪಾಷಾ ಶಿಕ್ಷೆಗೆ ಗುರಿಯಾದವನು. 2008 ರಲ್ಲಿ ಸಮೀರ್ ಪಾಷಾ, ಅಬ್ದುಲ್ ಫಾರೂಕ್ ಹಾಗೂ ಅಮೀನುಲ್ಲಾ ಎಂಬುವರು ಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದಾಗ ಕೃಷ್ಣರಾಜ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳ ಬಳಿ 50 ಕೆಜಿಗೂ ಹೆಚ್ಚಿನ ತೂಕದ ಗಂಧದ ಮರದ ತುಂಡುಗಳಿದ್ದವು. ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ  ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಅಬ್ದುಲ್ ಫಾರೂಕ್ ಹಾಗೂ ಅಮೀನುಲ್ಲಾ ಅವರು ಈ ಹಿಂದೆಯೇ ಶಿಕ್ಷೆಗೆ ಗುರಿಯಾಗಿದ್ದಾರೆ.

Leave a Reply

comments

Related Articles

error: