
ದೇಶ
ಕಾರ್, ಟ್ರಕ್ ಡಿಕ್ಕಿ : ಮೂವರ ದುರ್ಮರಣ
ಗುಜರಾತ್,ಏ.21: ಕಾರ್ ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಸಬರ್ಕಾಂತದ ಹಿಮಾತ್ ನಗರದ ಹತ್ತಿರದ ಕಾಕ್ರೋಲ್ ಗ್ರಾಮದ ಬಳಿ ನಡೆದಿದೆ.
ಮೃತರನ್ನು ನಿರ್ಮಲ್ ಪಟೇಲ್ (24), ಇವರ ಪತ್ನಿ ಭೂಮಿಕಾ ಪಟೇಲ್ (23) ಹಾಗೂ ಚಾಲಕ ಧರ್ಮೇಂದ್ರ ಪಟೇಲ್ (20) ಎಂದು ಗುರುತಿಸಲಾಗಿದೆ. ದಂಪತಿ ಅಹಮದಾಬಾದ್ ವಾಸ್ತ್ರಾಲ್ ನ ರಘುಲಿಲಾ ಅಪಾರ್ಟ್ ಮೆಂಟ್ ನಿವಾಸಿಗಳು ಎಂದು ತಿಳಿದುಬಂದಿದೆ. ಚಾಲಕ ಮೆಹಸಾನಾದ ಬೆಚಾರಾಜಿಯಲ್ಲಿರುವ ಜಂಟ್ರಲ್ ಗ್ರಾಮದ ನಿವಾಸಿಯಾಗಿದ್ದಾರೆ. ಶ್ಯಾಮಲಾಜಿನಿಂದ ಅಹಮದಾಬಾದ್ ಕಡೆಗೆ ಹೋಗುತ್ತಿದ್ದ ಕಾರ್ ಸಬರ್ಕಾಂತದ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ವಿರುದ್ಧ ದಿಕ್ಕಿನಿಂದ ಅಹಮದಾಬಾದ್ ಕಡೆಯಿಂದ ರಾಜಸ್ಥಾನ್ ಕಡೆಗೆ ಬರುತ್ತಿದ್ದ ಟ್ರಕ್ ಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಟ್ರಕ್ ಡಿಕ್ಕಿ ಹೊಡೆದು ನಂತರ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್, ಟ್ರಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಸೇರಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ ಗಾಯಗೊಂಡಿದ್ದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. (ವರದಿ: ಪಿ.ಎಸ್ )