ದೇಶವಿದೇಶ

ಸೌದಿಯತ್ತ ಮತ್ತೆ ಕ್ಷಿಪಣಿ ಹಾರಿಸಿದ ಹೌದಿ ಬಂಡುಕೋರರು!

ರಿಯಾದ್ (ಏ.21): ಯಮನ್‌ನಿಂದ ಸೌದಿ ಅರೇಬಿಯದ ಗಡಿ ರಾಜ್ಯ ಜಝನ್‌ನತ್ತ ಹೌದಿ ಬಂಡುಕೋರರು ಶುಕ್ರವಾರ ಉಡಾಯಿಸಿದ ಕ್ಷಿಪಣಿಯನ್ನು ಸೌದಿ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ. ಇದಕ್ಕೂ ಮೊದಲು ಸೋಮವಾರ ಹೌದಿ ಬಂಡುಕೋರರು ಹಾರಿಸಿದ್ದ ಇನ್ನೊಂದು ಕ್ಷಿಪಣಿಯನ್ನೂ ಸೌದಿ ಪಡೆಗಳು ಹೊಡೆದುರುಳಿಸಿದ್ದವು.

ಇನ್ನು ಮುಂದೆ ಈ ರೀತಿಯ ಕ್ಷಿಪಣಿ ದಾಳಿ ನಡೆದರೆ ನೀಡಲಾಗುವ ಪ್ರತಿಕ್ರಿಯೆ ನೋವಿನಿಂದ ಕೂಡಿರುತ್ತದೆ ಎಂದು ಸೌದಿ ಅರೇಬಿಯಾ ಎಚ್ಚರಿಸಿದ ಗಂಟೆಗಳ ಬಳಿಕ ಈ ಹೊಸ ದಾಳಿ ನಡೆದಿದೆ. ಈವರೆಗೆ, ಹೌದಿ ಬಂಡುಕೋರರು 100ಕ್ಕೂ ಅಧಿಕ ಕ್ಷಿಪಣಿಗಳನ್ನು ಸೌದಿ ನಗರಗಳತ್ತ ಉಡಾಯಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಸೌದಿ ಅರೇಬಿಯಾವು ಮುಂದೆ ನಿರ್ದಾಕ್ಷಿಣ್ಯ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.(ಎನ್.ಬಿ)

Leave a Reply

comments

Related Articles

error: