ಮೈಸೂರು

ಮೈಸೂರಿನಲ್ಲಿ ತುಂತುರು ಮಳೆ

ಮೈಸೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ.

ಕೆಲ ದಿನಗಳಿಂದ ತೀವ್ರ ಚಳಿಯು ಜನರನ್ನು ಕಾಡುತ್ತಿದ್ದು, ಈಗ ಚಳಿ ಗಾಳಿಯ ಜೊತೆ ಬಿದ್ದ ಮಳೆಯೂ ಇನ್ನಷ್ಟು ಚಳಿಯನ್ನು ಉಂಟುಮಾಡಿದೆ. ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ಮಳೆಯಾಯಿತು.

ಚೆನ್ನೈನಲ್ಲಿ ಉಂಟಾಗಿರುವ ‘ನಾಡಾ’ ಚಂಡಮಾರುತದ ಪರಿಣಾಮವಾಗಿ ಮೈಸೂರಿನಲ್ಲಿ ಮಳೆಯಾಗಿದ್ದು, ಇನ್ನು ಎರಡು ದಿನಗಳು ಮಳೆಯಾಗುವ ಸಾಧ್ಯತೆಯಿದೆ.

Leave a Reply

comments

Related Articles

error: