ಪ್ರಮುಖ ಸುದ್ದಿಮೈಸೂರು

ಇಂದಿನಿಂದ ಹಳೆ 500 ರೂ ನೋಟು ಪೆಟ್ರೋಲ್ ಬಂಕ್, ಏರ್‍ಪೋರ್ಟ್‍ಗಳಲ್ಲಿಯೂ ಚಲಾವಣೆಯಿಲ್ಲ

ಹಳೆ 500 ಹಾಗೂ 1000 ರೂ. ಮೌಲ್ಯದ ನೋಟುಗಳು ಇಂದಿನಿಂದ ಪೆಟ್ರೋಲ್ ಬಂಕ್ ಹಾಗೂ ಏರ್‍ಪೋರ್ಟ್‍ಗಳಲ್ಲಿಯೂ ಬಂದ್‍ ಆಗಲಿದೆ.

ಕಾಳಧನಿಕರನ್ನು ಹಣಿಯುವ ಉದ್ದೇಶ ಹಾಗೂ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ.8 ರಂದು ಹಳೆ 500 ಹಾಗೂ 1000 ನೋಟುಗಳನ್ನು ಅಮಾನ್ಯಗೊಳಿಸಿತ್ತು, ಆದರೂ ಕೆಲವೊಂದು ತುರ್ತು ಸೇವೆಗಳಾದ, ಆಸ್ಪತ್ರೆ, ಪೆಟ್ರೋಲ್ ಬಂಕ್, ರೈಲ್ವೆ, ಏರ್‍ಪೋರ್ಟ್ ಗಳಲ್ಲಿ ಇಂದಿನವರೆಗೂ ಹಳೆನೋಟುಗಳನ್ನು ಸ್ವೀಕರಿಸಲಾಗುತ್ತಿತ್ತು. ಸಾರ್ವಜನಿಕವಾಗಿ ಕಳೆದ ವಾರವಷ್ಟೇ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯು ನಿಂತಿತ್ತು ಇಂದು (ಡಿ.2) ಮಧ್ಯರಾತ್ರಿಯಿಂದಲೇ 500 ರೂಪಾಯಿ ನೋಟುಗಳು ಅಲ್ಲಿಯೂ ಚಲಾವಣೆಗೊಳ್ಳುವುದಿಲ್ಲ. ನೋಟು ಅಮಾನ್ಯ ಹಿನ್ನೆಲೆಯಲ್ಲಿ ಏರ್‍ಪೋರ್ಟ್‍ಗಳಲ್ಲಿ, ಪಾರ್ಕಿಂಗ್ ಹಾಗೂ ಹೆದ್ದಾರಿಗಳಲ್ಲಿ ಟೋಲ್‍ ಶುಲ್ಕವನ್ನು ಸಡಿಲಗೊಳಿಸಲಾಗಿತ್ತು. ಇಂದಿನಿಂದ ಟೋಲ್‍ ಆರಂಭವಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ.

ನೋಟು ಸ್ವೀಕರಿಸಲು ಡಿ.15ರವರೆಗೂ ಗಡಿವನ್ನು ಏಕಾಏಕಿ ಡಿ.2ರ ಮಧ್ಯರಾತ್ರಿವರೆಗೆ ಸೀಮಿತಗೊಳಿ ಆದೇಶ ಹೊರಡಿಸಿದೆ. ಬ್ಯಾಂಕ್‍ಗಳು ಸಹಜಸ್ಥಿತಿಗೆ ಮರಳುತ್ತಿದ್ದು ಹಣ ಬದಲಾವಣೆಗಾಗಿ ನಿಲ್ಲುತ್ತಿದ್ದ ಉದ್ದುದ್ದಾ ಲೈನ್‍ಗಳು ಕಮ್ಮಿಯಾಗಿದ್ದು. ಹಲವಾರು ಎಟಿಎಂಗಳು ಕಾರ್ಯನಿರ್ವಹಿಸುತ್ತಾ ಹಣದ ಬವಣೆಯನ್ನು ನೀಗಿಸುತ್ತಿವೆ.

Leave a Reply

comments

Related Articles

error: