ಪ್ರಮುಖ ಸುದ್ದಿಮೈಸೂರು

ನಗದು ರಹಿತ ಹಣಕಾಸು ವ್ಯವಸ್ಥೆಗೆ ಆಧಾರ್‍ ಗುರುತು ಮಾನದಂಡ

ನೋಟು ಅಮಾನ್ಯತೆ ಬೆನ್ನ ಹಿಂದೆಯೇ, ನಗದು ರಹಿತ ಹಣಕಾಸು ವ್ಯವಹಾರಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಆದಕ್ಕೆ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಅದೇ ನಿಮ್ಮ ಅಕೌಂಟ್‍ನ ಸಂಖ್ಯೆಯಾಗಲಿದ್ದು ಪಾಸ್‍ವರ್ಡ್‍ ಆಗಿ ನಿಮ್ಮ ಬೆರಳಚ್ಚು ಅಥವಾ ನೇತ್ರ ಬಿಂಬವನ್ನು ಬಳಸಲು ಸರ್ಕಾರ ನಿರ್ಧರಿಸಿದೆ.

ನಗದು ರಹಿತ ಹಣಕಾಸು ವ್ಯವಹಾರಕ್ಕೆ ಡೆಬಿಟ್, ಕ್ರೆಡಿಟ್ ಕಾರ್ಡ್ ಹಾಗೂ ಪಿನ್ ಸಂಖ್ಯೆಯೂ ಬೇಕಾಗಿಲ್ಲ. ಕೇವಲ ಆಧಾರ್ ಸಂಖ್ಯೆ ಹಾಗೂ ಪಾಸ್‍ವರ್ಡ್ ಆಗಿಲಿದ್ದು ಸ್ವಯಂ ಸಾಕ್ಷಿಗೆ ನಿಮ್ಮೆ ಬೆರಳಚ್ಚು ಅಥವಾ ನೇತ್ರ ಬಿಂಬ (ಐರಿಸ್ ಸ್ಕ್ಯಾನ್) ಬಳಸಲಾಗುವುದು. ಆ್ಯಂಡ್ರಾಯ್ಡ್ ಪೋನ್ ಬಳಕೆದಾರರು ಡಿಜಿಟಲ್ ರೂಪದಲ್ಲಿ ಹಣಕಾಸು ವ್ಯವಹಾರ ನಡೆಸುವಂತೆ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದ್ದು ಮೊಬೈಲ್ ಉತ್ಪಾದಕರು, ವ್ಯಾಪಾರಿಗಳು ಹಾಗೂ ಬ್ಯಾಂಕ್‍ ಅಧಿಕಾರಿಗಳ ಜತೆ ಸಮಾಲೋಚಿಸಬೇಕಾಗಿದೆ. ದೇಶದಲ್ಲಿ ಉತ್ಪಾದನೆಗೊಳ್ಳುವ ಎಲ್ಲ ಮೊಬೈಲ್ ಪೋನ್‍ಗಳಲ್ಲಿ ಐರಿಸ್ ಅಥವಾ ಬೆರಳಚ್ಚು ಗುರುತು ಪತ್ತೆ ವ್ಯವಸ್ಥೆ ಅಳವಡಿಸಲು ಸಾಧ್ಯವೇ ಎನ್ನುವ ಪ್ರಶ‍್ನೆಯನ್ನು ಸರ್ಕಾರ ಮೊಬೈಲ್ ಉತ್ಪಾದನಾ ಕಂಪನಿಗಳಿಗೆ ಕೇಳುತ್ತಿದ್ದು, ಒಂದು ವೇಳೆ ಇದು ಯಶಸ್ವಿಯಾದರೆ ವ್ಯವಹಾರ ಸುಲಭವಾಗಲಿದೆ ಎಂದು ನೀತಿ ಆಯೋಗದ ಸಿಇಓ ಅಮಿತಾಬ್‍ ಕಾಂತ್ ತಿಳಿಸಿದ್ದಾರೆ.

Leave a Reply

comments

Related Articles

error: