
ಮೈಸೂರು
ಸದ್ಯದಲ್ಲೇ ಕೆಎಸ್ಓಯು ಗೆ ಮಾನ್ಯತೆ: ಯುಜಿಸಿ ಅಧ್ಯಕ್ಷ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಶೀಘ್ರಲ್ಲಿಯೇ ಮಾನ್ಯತೆ ದೊರೆಯಲಿದೆ ಎಂದು ವಿವಿಗಳ ಧನಸಹಾಯ ಆಯೋಗ-ಯುಜಿಸಿ ಅಧ್ಯಕ್ಷ ಪ್ರೊ. ವೇದಪ್ರಕಾಶ್ ತಿಳಿಸಿದ್ದಾರೆ.
ಗುರುವಾರ ಮೈಸೂರು ವಿವಿಯ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕೆ.ಎಸ್.ಓ.ಯು.ಗೆ ಮತ್ತೆ ಮಾನ್ಯತೆ ನೀಡುವ ಉದ್ದೇಶದಿಂದ ಯುಜಿಸಿ ಸಮಿತಿಗಳನ್ನು ಮುಕ್ತ ವಿವಿಗೆ ಕಳುಹಿಸಿದ ಸಮಿತಿಯ ವರದಿಯನ್ವಯ ವಿವಿಯಲ್ಲಿ ಕೆಲವೊಂದು ಲೋಪದೋಷಗಳು ಬೆಳಕಿಕೆ ಬಂದಿದ್ದು, ಮಾನ್ಯತೆ ನೀಡುವ ಕುರಿತು ಯುಜಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು. ಮತ್ತೆ ಮಾನ್ಯತೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.