
ಪ್ರಮುಖ ಸುದ್ದಿಮೈಸೂರು
ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಪ್ರಕರಣ: ಸ್ಥಳ ಮಹಜರು
ಆಗಸ್ಟ್ 1 ರಂದು ಮೈಸೂರು ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಎನ್ಐಎ ತಂಡ ಮೈಸೂರಿಗೆ ಕರೆತಂದಿದೆ. ನ್ಯಾಯಾಲಯದ ಆವರಣದಲ್ಲಿ ಸ್ಥಳ ಮಹಜರು ನಡೆಸಲಾಯಿತು.
ದಾವೂದ್ ಸುಲೈಮಾನ್ ಅಲಿಯಾಸ್ ಅಲಿ ಕಚ್ಚಾ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಸಾಫ್ಟ್ವೇರ್ ಇಂಜಿನಿಯರ್ ಆಗಿ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ. ಮಧಯರೈ, ಚಿತ್ತೂರು, ನೆಲ್ಲೂರು, ಕೊಲ್ಲಂ ಮತ್ತು ಮಲ್ಲಾಪುರಂಗಳಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ತಮಿಳನಾಡಿನ ಮಧುರೈನಲ್ಲಿ ಐದು ಮಂದಿ ಉಗ್ರರನ್ನು ಬಂಧಿಸಲಾಗಿತ್ತು.
ಲಕ್ಷ್ಮೀಪುರಂನ ಎಸಿಪಿ ಕಚೇರಿಯಲ್ಲಿ ಉಗ್ರರ ತೀವ್ರ ವಿಚಾರಣೆ ನಡೆಯುತ್ತಿದೆ. ಉಗ್ರರು ಸ್ಫೋಟಕ್ಕೂ ಮುನ್ನ ನಗರದ ಹಲವೆಡೆ ತಂಗಿದ್ದರು ಎನ್ನುವ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಲಾಗುತ್ತಿದೆ.