ದೇಶ

ರಿಲಯನ್ಸ್ ಜಿಯೊ ಮುಂದಿನ ಮಾರ್ಚ್‍ವರೆಗೆ ಉಚಿತ

ರಿಲಯನ್ಸ್ ಜಿಯೊ ಮೊಬೈಲ್ ಸೇವೆಯ ಉಚಿತ ಕರೆ ಮತ್ತು ಡೇಟಾ ಸೌಲಭ್ಯವನ್ನು 2017ರ  ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಅತ್ಯಲ್ಪ ಅವಧಿಯಲ್ಲಿ 5.2 ಕೋಟಿ ಚಂದಾದಾರರನ್ನು ಹೊಂದಿರುವ ಹೆಗ್ಗಳಿಕೆ ಹೊಂದಿರುವ ಜಿಯೊ ಮೊಬೈಲ್‍ನ ಉಚಿತ ಕರೆ ಸೌಲಭ್ಯವನ್ನು ಇನ್ನೂ ನಾಲ್ಕು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಗುರುವಾರ ಪ್ರಕಟಿಸಿದರು.

ಶೇ.20ರಷ್ಟು ಗ್ರಾಹಕರು ಗರಿಷ್ಠ ಪ್ರಮಾಣದಲ್ಲಿ ದತ್ತಾಂಶ ಬಳಕೆ ಮಾಡುತ್ತಿರುವುದರಿಂದ ಸಂಪರ್ಕ ಜಾಲದಲ್ಲಿ ದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಗ್ರಾಹಕರು ದಿನವೊಂದಕ್ಕೆ 1 ಜಿಬಿ ಡೇಟಾ ಮಾತ್ರ ಉಚಿತವಾಗಿ ಬಳಸಬಹುದಾಗಿದೆ ಎಂದು ಹೇಳಿದರು.

‘ಹೊಸ ವರ್ಷದ ಕೊಡುಗೆ ರೂಪದಲ್ಲಿ ಡೇಟಾ, ಕರೆ, ವಿಡಿಯೋ ಮತ್ತು ಇತರ ಕಿರು ತಂತ್ರಾಂಶಗಳನ್ನು ಮಾರ್ಚ್ ತಿಂಗಳವರೆಗೆ ಉಚಿತವಾಗಿ ಒದಗಿಸಲಾಗುವುದು. ಇದು ಹಾಲಿ ಮತ್ತು ಡಿ.4ರ ನಂತರ ಚಂದಾದಾರರಾಗುವ ಗ್ರಾಹಕರಿಗೂ ಅನ್ವಯವಾಗಲಿದೆ. ಮನೆ, ಮನೆಗೆ ಜಿಯೊ ಸಿಮ್ ಕಾರ್ಡ್ ವಿತರಿಸಲಾಗುವುದು ಎಂದರು.

Leave a Reply

comments

Related Articles

error: