ಮೈಸೂರು

ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಅತಿ ಅವಶ್ಯ: ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್

ಮೈಸೂರಿನ ಜೆ.ಎಸ್‍.ಎಸ್. ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪರಿಹಾರ ಘಟಕವನ್ನು ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಗುರುವಾರದಂದು ಉದ್ಘಾಟಿಸಿದರು.

ಬಳಿಕ ಮಾತನಾಡಿ, ವಯೋಮಿತಿಯಿಲ್ಲದೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು ತಡೆಗಟ್ಟುವುದು ಅತಿ ಅವಶ್ಯವವಾಗಿದೆ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸರು ಗುರುತರ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿ ಸುಸಂಸ್ಕೃತ ಜೀವನವನ್ನು ನೀಡಬೇಕು. ದೂರು ನೀಡಲು ಠಾಣೆಗೆ ಬರುವವರನ್ನು ಅನುಮಾನಿಸುತ್ತಾರೆ ಎನ್ನುವ ಆರೋಪ ಪೊಲೀಸರ ಮೇಲಿದ್ದು , ಅನುಮಾನ ಪಡುವುದು ಪೊಲೀಸರ ನಡುವಳಿಕೆ ಎಂದು ಹಾಸ್ಯದ ಚಟಾಕಿ ಹಾರಿಸಿ ಅದನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ ಮಾತನಾಡಿ, ಲೈಂಗಿಕ ದೌರ್ಜನ್ಯಕೊಳಗಾದವರಿಗೆ ಕಾನೂನು ನೆರವು ಹಾಗೂ ಚಿಕಿತ್ಸೆಯನ್ನು ಒಂದೆ ಸೂರಿನಡಿ ಕಲ್ಪಿಸುವ ನಿಟ್ಟಿನಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಚಿಕಿತ್ಸಾ ಘಟಕವನ್ನು ಆರಂಭಿಸಲಾಗಿದೆ. ಇದರಂತೆ ಎಲ್ಲ ತಾಲೂಕು ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲೂ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಚೀ.ಜ.ರಾಜೀವ್,  ಮಕ್ಕಳ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾ ಖರೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಪದ್ಮಾ, ಜೆ.ಎಸ್.ಎಸ್. ಆಸ್ಪತ್ರೆ ನಿರ್ದೇಶಕ ಡಾ.ಎಂ.ಡಿ.ರವಿ. ಡಾ.ಪ್ರತಿಭಾ ಪರೇರಾ. ಡಾ.ರೋಶಿನಿ ಉಪಸ್ಥಿತರಿದ್ದರು. ಬೆಂಗಳೂರಿನ ಎಂ.ಎಸ್.ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಚಂದ್ರಿಕಾ ರಾವ್, ಡಾ.ಜೆಸ್ಸಿಕಾ ಫರ್ನಾಂಡೀಸ್, ಡಾ.ವೈಜಯಂತಿ, ಡಾ.ಅಕ್ಷಿತ್ ರಾಜ್‍ ಶೆಟ್ಟಿ ಯವರ ವೈದ್ಯತಂಡವು ಈ ಸಂದರ್ಭದಲ್ಲಿ ಲೈಂಗಿಕ ಹಾಗೂ ಇನ್ನಿತರ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಚಿಕಿತ್ಸೆಗೆ ಬಂದಾಗ ಅವರ ಸುಶ್ರೂಷೆಯ ಬಗ್ಗೆ ವಿವರಿಸಿದರು.

Leave a Reply

comments

Related Articles

error: