ಸುದ್ದಿ ಸಂಕ್ಷಿಪ್ತ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿವಿಧ ತಪಾಸಣಾ ಶಿಬಿರ

ಮೈಸೂರು,ಏ.23 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೈಬ್ರೋಸ್ಕ್ಯಾನ್ ಬಳಸಿ ಲಿವರ್ ತಪಾಸಣೆಯನ್ನು ಏ.24ರ ಬೆಳಗ್ಗೆ 10 ರಿಂದ 3ರವರೆಗೆ ಆಯೋಜಿಸಿದೆ.

ಕಿಬ್ಬೊಟ್ಟೆ- ಕಾಲುಗಳಲ್ಲಿ ಊಟ, ಕಣ್ಣು ಮತ್ತು ಚರ್ಮ ಹಳದಿ, ಚರ್ಮದಲ್ಲಿ ತುರಿಕೆ, ಹಸಿವಾಗದಿರುವುದು, ನಿಶಕ್ತಿ ಮುಂತಾದ ಸಮಸ್ಯೆಗಳು ಕಂಡು ಬಂದವರು ಶಿಬಿರದಲ್ಲಿ ತಪಾಸಣೆ ನಡೆಸಿಕೊಳ್ಳಬಹುದು.

ವೆರಿಕೋಸ್ ವೇನ್ಸ್ (ಊದಿಕೊಂಡ ರಕ್ತನಾಳ) ಕ್ಲಿನಿಕ್ :

ಊದಿಕೊಂಡ ರಕ್ತನಾಳಗಳಿಂದ ಬಳಲುತ್ತಿರುವ ರೋಗಿಗಳ ತಪಾಸಣಾ ಶಿಬಿರವನ್ನು ಏ.24ರ ಬೆಳಗ್ಗೆ 10 ರಿಂದ 12ರವರೆಗೆ ನಡೆಸಲಾಗುವುದು. ಶಿಬಿರದಲ್ಲಿ ರಕ್ತದೊತ್ತಡ ತಪಾಸಣೆ, ಇಂಟರ್ ವೆನ್ಶನಲ್ ರೇಡಿಯಾಲಜಿಸ್ಟ್ ರೊಂದಿಗೆ ಸಮಾಲೋಚನೆಯನ್ನು ಆಯೋಜಿಸಿದೆ.

ಶಿಬಿರಕ್ಕೆ ಸಂಬಂಧಿಸಿದ ಮಾಹಿತಿಗಾಗಿ ಮೊ.ನಂ. 95380 52378 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: