ಮೈಸೂರು

ಪುಟ್ಟಣ್ಣ ಕಣಗಾಲ್‍ ಅವರ 83ನೇ ಜನ್ಮದಿನಾಚರಣೆ

ಕನ್ನಡದ ಪ್ರಸಿದ್ಧ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 83ನೇ ಹುಟ್ಟುಹಬ್ಬವನ್ನು ಪರಿವರ್ತನಂ ಟ್ರಸ್ಟ್ ಗುರುವಾರದಂದು ಅಪೂರ್ವ ಸಭಾಂಗಣದಲ್ಲಿ ಆಯೋಜಿಸಿತ್ತು.

‘ಚಿತ್ರಬ್ರಹ್ಮನ ನೆನಪು’ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್. ರವಿಶಂಕರ್ ಅವರು ಪುಟ್ಟಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಪುಟ್ಟಣ್ಣ ಕಣಗಾಲ್ ಮೈಸೂರಿನವರಾಗಿದ್ದು, ಅವರು ನಿರ್ದೇಶಿಸಿದ ಚಿತ್ರಗಳು ರಾಜ್ಯದಲ್ಲೇ ಹೆಸರು ಮಾಡಿದ್ದವು. ಅವರು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಕಲಾವಿದರನ್ನು ಪರಿಚಿಯಿಸಿದ್ದರು. ನಾಗರಹಾವು ಚಿತ್ರದ ಬಳಿಕ ಚಿತ್ರದುರ್ಗದ ಕಲ್ಲಿನಕೋಟೆ ಪ್ರಸಿದ್ಧ ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿತು ಎಂದು ಹೇಳಿದರು.

ಡಿ.ಟಿ. ಪ್ರಕಾಶ್, ವಿಜಯ್ ಕುಮಾರ್, ನಟರಾಜ್, ವಿನಯ್ ಕಣಗಾಲ್, ಅಪೂರ್ವ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: