ಸುದ್ದಿ ಸಂಕ್ಷಿಪ್ತ

ಏ.24ರಿಂದ ‘ಜೀವನೋತ್ಸಾಹ ಶಿಬಿರ’

ಮೈಸೂರು,ಏ.23 : ಜೆಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಜೆಎಸ್ಎಸ್ ಅಂತಾರಾಷ್ಟ್ರೀಯ ಶಾಲಾ ಶಿಕ್ಷಕರಿಗಾಗಿ ಜೀವನೋತ್ಸಾಹ ಶಿಬಿರವನ್ನು  ಏ.24 ರಿಂದ 29ರವರೆಗೆ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿದೆ.

ಸುತ್ತೂರಿನ ಜೆಎಸ್ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸುವರು.

ಜೀವನದಲ್ಲಿ ಯೋಗದ ಮಹತ್ವ ಕುರಿತು ಎಸ್.ಎನ್.ಓಂಕಾರ್, ಸಿದ್ದೇಶ್ವರ ಶ್ರೀಗಳ ಪ್ರವಚನ, ಜೀವನ ಮತ್ತು ಹಾಸ್ಯದ ಬಗ್ಗೆ ಡಾ.ಎಂ.ಕೃಷ್ಣೇಗೌಡ, ಪ್ರಜ್ಞಾನವಂತಿಕೆಯ ಮನಸ್ಸು ಕುರಿತು ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್, ನಿಶ್ಚಿಂತ ಜೀವನ ವಿಷಯವಾಗಿ ಎಸ್.ಷಡಕ್ಷರಿ ಸೇರಿದಂತೆ ಹಲವು ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: