ಮೈಸೂರು

ಏ.28ರಂದು ‘ರಾಜು ಗಾನಲಹರಿ’ ಸಂಗೀತ ಕಾರ್ಯಕ್ರಮ

ಮೈಸೂರು,ಏ.24 : ಕುವೆಂಪುನಗರದ ನಾದಾಮೃತ ಸಂಗೀತ ವಿದ್ಯಾಲಯದ ವತಿಯಿಂದ ರಾಜು ಅನಂತಸ್ವಾಮಿ ಸ್ಮರಣಾರ್ಥ ‘ರಾಜು ಗಾನಲಹರಿ’ ಕಾರ್ಯಕ್ರಮವನ್ನು ಗಾನಭಾರತಿಯ ವೀಣೆ ಶೇಷಣ್ಣ ಭವನದಲ್ಲಿ ಏ.28ರಂದು ಆಯೋಜಿಸಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ತಿಳಿಸಿದರು.

ಅಂದು ಸಂಜೆ 5.30ಕ್ಕೆ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಉದ್ಘಾಟಿಸಲಿದ್ದು, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ದನ್ ಅಧ್ಯಕ್ಷತೆ ವಹಿಸುವರು, ಮೈಸೂರು ಅನಂತಸ್ವಾಮಿಯವರ ಪತ್ನಿ ಹಾಗೂ ರಾಜು ಅನಂತಸ್ವಾಮಿಯವರ ತಾಯಿಯವರಾದ ಶಾಂತಾ ಅನಂತಸ್ವಾಮಿಯವರು ವಿಶೇಷ ಆಹ್ವಾನಿತರಾಗಿ ಭಾಗಿಯಾಗುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಹಿರಿಯ ತಬಲ ವಾದಕ ಇಂದು ಶೇಖರ್ ಅವರನ್ನು ಸನ್ಮಾನಿಸಲಿದ್ದು, ಹಿನ್ನಲೆ ಗಾಯಕಿ ಸಂಗೀತಾ ರವೀಂದ್ರ ಉಪಸ್ಥಿತರಿರುವರು. ನಂತರ ವಿದ್ಯಾರ್ಥಿಗಳಿಂದ ರಾಜು ಅನಂತಸ್ವಾಮಿಯವರ ಸಂಯೋಜನೆಗಳ ಗೀತ ಗಾಯನ ಇರುವುದು ಎಂದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: