
ನವದೆಹಲಿ,ಏ.24: ಭಾರತದ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.
ಸಾನಿಯಾ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲಿಕ್ ದಂಪತಿಗಳಿಬ್ಬರು ಟ್ವಿಟ್ಟರ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. 2010ರಲ್ಲಿ ಸಾನಿಯಾ, ಪಾಕಿಸ್ತಾನದ ಕ್ರಿಕೆಟಿ ಶೋಯಬ್ ಜೊತೆ ಹೈದರಾಬಾದ್ ನಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ 8 ವರ್ಷಗಳ ನಂತರ ಸಾನಿಯಾ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
#BabyMirzaMalik 👶🏽❤️ pic.twitter.com/RTYpqok1Vl
— Sania Mirza (@MirzaSania) April 23, 2018
ಟ್ವಿಟ್ಟರ್ ನಲ್ಲಿ ಮಿರ್ಜಾ ಮಲಿಕ್ ಎಂಬ ಶೀರ್ಷಿಕೆಯಡಿ ತಿಜೋರಿಯ ಫೋಟೋ ಹಾಕಿಕೊಂಡಿದ್ದಾರೆ. ಈ ತಿಜೋರಿಯಲ್ಲಿ ಮೂರು ಕಬೋರ್ಡ್ ಗಳಿದ್ದು, ಅದರಲ್ಲಿ ಮೂರು ಟೀಶರ್ಟ್ ಗಳಿವೆ. ಒಂದು ಟಿಶರ್ಟ್ ಮೇಲೆ ಮಲ್ಲಿಕ್ ಇನ್ನೊಂದರ ಮೇಲೆ ಮಿರ್ಜಾ ಅಂತಾ ಬರೆಯಲಾಗಿದೆ. ಈ ಎರಡು ಟೀಶರ್ಟ್ ಗಳ ಮಧ್ಯದಲ್ಲಿ ಮಿರ್ಜಾ-ಮಲಿಕ್ ಅಂತಾ ಬರೆದಿರುವ ಪುಟಾಣಿ ಬೇಬಿ ಡ್ರೆಸ್ ಕೂಡ ಇದೆ.(ವರದಿ: ಪಿ.ಎಸ್ )