ಮೈಸೂರು

ಪ್ರತಿಭಾವಂತ ಅಂಧ ಉಪನ್ಯಾಸಕ ಮಂಜುನಾಥ್ ಗೆ ಡಾಕ್ಟರೇಟ್ ಪದವಿ

ಡಾ. ದಯಾನಂದ ಮಾನೆ ಅವರ ಮಾರ್ಗದರ್ಶನದಲ್ಲಿ ಮಂಜುನಾಥ್ ಸಿ. ಅವರು “ಕರ್ನಾಟಕದಲ್ಲಿ ವಿದ್ಯಾರ್ಥಿ ಚಳುವಳಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಒಂದು ಅಧ್ಯಯನ” ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ರಾಜ್ಯಶಾಸ್ತ್ರ ವಿಭಾಗದಿಂದ ಪಿಎಚ್‍ಡಿ ಪದವಿ ನೀಡಲಾಗಿದ್ದು ಮೈಸೂರು ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಗುವುದು.

ಪಾವಗಡ ತಾಲ್ಲೂಕಿನ ಕತ್ತಿಕ್ಯಾತನಹಳ್ಳಿ ಗ್ರಾಮದ ಮೂಲ ನಿವಾಸಿಯಾದ ಸುಶೀಲಮ್ಮ ಮತ್ತು ಚಂದ್ರಚಾರಿ ಮಗನಾದ ಮಂಜುನಾಥ್ ಅವರು ಅಂಧ ವಿದ್ಯಾರ್ಥಿಯಾಗಿದ್ದು, ಸ್ವಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಡ್ಯದಲ್ಲಿ ಪದವಿ ಪೂರ್ವ ಶಿಕ್ಷಣ, ನಂತರ ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ದೂರ-ಶಿಕ್ಷಣದಲ್ಲಿ ಎಂ.ಫಿಲ್. ಪದವಿ ಹಾಗೂ ಮೈಸೂರು ವಿವಿಯಲ್ಲಿಯೇ ಪಿಎಚ್.ಡಿ. ಪದವಿ ಪಡೆದು ಸಾಧನೆ ಮೆರೆದಿದ್ದಾರೆ. ಸಾಧನೆಗೆ ದೈಹಿಕ ನ್ಯೂನ್ಯತೆ ಅಡ್ಡಿಬರುವುದಿಲ್ಲವೆಂದು ಸಾಧಿಸಿ ಇತರರಿಗೆ ಮಾರ್ಗದರ್ಶಿಯಾಗಿದ್ದಾರೆ. ಪ್ರಸ್ತುತ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

comments

Related Articles

error: