ದೇಶ

ಗೂಡ್ಸ್ ರೈಲ್ ಮುಂದೆ ಜಿಗಿದು ನವವಿವಾಹಿತ ಆತ್ಮಹತ್ಯೆಗೆ ಶರಣು

ನವದೆಹಲಿ,ಏ.24: ಚಲಿಸುತ್ತಿದ್ದ ರೈಲಿಗೆ ಜಿಗಿದು ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ.

ಆಕಾಶ್ ನೊಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ (22) ಆತ್ಮಹತ್ಯೆಗೆ ಶರಣಾದ ವರ. ಪ್ರೇಮ್ ಸಿಂಗ್ ಅವರ ಪುತ್ರ ಆಕಾಶ್ ಮದುವೆ ಏ. 20ರಂದು ರಾಕೇಶ್ ಕುಮಾರ್ ಅವರ ಪುತ್ರಿ ಅನು ಜೊತೆ ನಡೆದಿತ್ತು. ಮದುವೆಯಾಗಿ ಮೂರೇ ದಿನಕ್ಕೆ ವಧುವಿನ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆ ನಡೆದ ನಂತರ ಕೆಲವು ಶಾಸ್ತ್ರಗಳು ನಡೆದಿರಲಿಲ್ಲ. ಹಾಗಾಗಿ ವಧುವಿನ ಮನೆಯವರ ಊಟದ ವ್ಯವಸ್ಥೆ ಹಾಗೂ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಕಾಶ್ ಗೆ ಹೇಳಲಾಗಿತ್ತು. ಅಲ್ಲದೇ ತನ್ನ ಹಣದಲೇ ಅವರಿಗೆ ಬೇಕಾದ ಎಲ್ಲ ವಸ್ತುವನ್ನು ಖರೀದಿಸಬೇಕೆಂದು ಹಿರಿಯರು ಆತನಿಗೆ ಹೇಳಿದ್ದರು. ಆಕಾಶ್ ಹತ್ತಿರ ಹಣವಿಲ್ಲದ ಕಾರಣ ಆತ ಬೇರೆಯವರ ಹತ್ತಿರ ಸಾಲ ಪಡೆಯಲು ಹೋಗಿದ್ದ. ಆದರೆ ಶಾಸ್ತ್ರ ಪೂರ್ಣಗೊಳಿಸಲು ಸಾಲ ಸಿಗದ ಕಾರಣ ಆಕಾಶ್ ಒತ್ತಡಕ್ಕೆ ಸಿಲುಕಿ ಗೂಡ್ಸ್ ರೈಲ್ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳವ ವೇಳೆ ಅಲ್ಲಿದ್ದ ಜನರು ಕಿರುಚಿ ಆತನನ್ನು ತಡೆಯಲು ಪ್ರಯತ್ನಿಸಿದ್ದರು. ಆತ ಯಾರ ಮಾತು ಕೇಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. (ವರದಿ; ಪಿ.ಎಸ್ )

Leave a Reply

comments

Related Articles

error: