
ಮೈಸೂರು
ಐಎನ್ಟಿಎಲ್ ಯೂತ್ ಹಾಸ್ಟೆಲ್ ಉದ್ಘಾಟನೆ ಡಿ.4ರಂದು
ಮೈಸೂರು ಅಂತಾರಾಷ್ಟ್ರೀಯ ಯೂತ್ ಹಾಸ್ಟೆಲ್ ಮತ್ತು ಹಾಸ್ಟೆಲಿಂಗ್ ಫಾರ್ ಪೀಸ್ ಅಂಡ್ ಅಂಡರ್ಸ್ಟ್ಯಾಂಡಿಂಗ್ ಅಕಾಡೆಮಿಯನ್ನು ಡಿ.4ರಂದು ಎಂಎಲ್ಸಿಡಿ. ಮಾದೇಗೌಡ ಅವರು ಉದ್ಘಾಟಿಸಲಿದ್ದಾರೆ. ಗೋಕುಲಂ ಎರಡನೇ ಹಂತದಲ್ಲಿರುವ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ( ವೈಎಚ್ಎಐ)ದ ಕರ್ನಾಟಕ ಶಾಖೆಯಲ್ಲಿ ಅಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವೈಎಚ್ಎಐ ಅಧ್ಯಕ್ಷ ಮೊಹಮ್ಮದ್ ಶಫಿ ಪಂಡಿತ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಎಸ್. ವೆಂಕಟ್ ನಾರಾಯಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೈಎಚ್ಎಐ ಉಪಾಧ್ಯಕ್ಷರಾದ ಕೆ. ಪುರುಷೋತ್ತಮ, ಎ.ಕೆ. ಖನ್ನಾ, ಜೆ. ಶಿಂಧೆ ಮತ್ತು ಹೃಷಿಕೇಶ್ ಯಾದವ್, ರಾಷ್ಟ್ರೀಯ ಖಜಾಂಚಿ ಮನೋಜ್ ಜೊಹ್ರಿ, ಸಿಇಒ ಯುದಿಷ್ಠಿರ್ ಶರ್ಮ ಮತ್ತು ಅಧ್ಯಕ್ಷ ಎಚ್.ಡಿ.ಸಿ. ರಶ್ಮಿಕಾಂತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಹಾಸ್ಟೆಲ್ಗಳಲ್ಲಿ ಎಸಿ ಮತ್ತು ಅಡಿಯೋ/ವಿಡಿಯೋ ಸೌಲಭ್ಯದೊಂದಿಗೆ ಕ್ಲಾಸ್ ರೂಮುಗಳು, ಯುವಕರು ಮತ್ತು ಯುವತಿಯರಿಗೆ ಪ್ರತ್ಯೇಕ ನಿಲಯಗಳು, ಕಾನ್ಫರೆನ್ಸ್ ರೂಮು, ಉಚಿತ ವೈಫೈ ಪಾರ್ಕಿಂಗ್ ಸ್ಥಳ, ರಸ್ಟೋರೆಂಟ್, ಒಳಾಂಗಣ ಆಟಗಳು, ಜಿಮ್ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.