ಮೈಸೂರು

ಎಂ ಸಿ ಇ ಅಂಡ್ ಎಂ ಕಾಲೇಜಿನಿಂದ ನಿವೇದಿತಾ ಗೌಡ – ಯೋಗಿಗೆ ಸನ್ಮಾನ

ಮೈಸೂರು,ಏ.24 : ಖಾಸಗಿ ವಾಹಿನಿಯ ರಿಯಾಲಿಟಿ ಷೋ ‘ಬಿಗ್ ಬಾಸ್’ ನ ಅಂತಿಮ ಸುತ್ತಿನ ಸ್ಪರ್ಧಿಯಾದ ನಿವೇದಿತಾ ಗೌಡ ಅವರನ್ನು ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಸಿ.ಎನ್.ರವಿಕುಮಾರ್, ಜ್ಞಾನವಾಹಿತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಬಿಡ್ಡಪ್ಪ, ಪ್ರೊ.ರೂಪಾ ಶ್ರೀ, ಪ್ರೊ.ನಾಗಭೂಷಣ್ ಮತ್ತಿತರು ಹಾಜರಿದ್ದರು.

ಈಚೆಗೆ ಕಾಲೇಜು ವತಿಯಿಂದ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಲನಚಿತ್ರ ಯೋಗಿ (ಲೂಸ್ ಮಾದ) ಪಾಲ್ಗೊಂಡು ಚಾಲನೆ ನೀಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಕಿಶೋರ್ ಬಿಡ್ಡಪ್ಪ, ಮೆಕ್ಯಾನಿಕಲ್ ವಿಭಾಗದ ಪ್ರೊ.ಡಾ.ಶ್ರೀನಿವಾಸನ್ ಇನ್ನಿತರರು ಇದ್ದರು. (ಕೆ.ಎಂ.ಆರ್)

 

 

Leave a Reply

comments

Related Articles

error: