ಮೈಸೂರು

ಅಪಘಾತ: ಯುವಕ ಸಾವು

ಮೈಸೂರು,ಏ.25-ಸ್ಕೂಟರ್ ಹಾಗೂ ಗೂಡ್ಸ್ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಸಮೀಪದ ಬ್ಯಾತಹಳ್ಳಿ ಬಳಿ ನಡೆದಿದೆ.

ನಂಜನಗೂಡಿನ ಕಡಕೊಳದಲ್ಲಿರುವ ಟಿವಿಎಸ್ ಫ್ಯಾಕ್ಟರಿಯಲ್ಲಿ ಟ್ರೈನಿಯಾಗಿ ಕೆಲಸ ಮಾಡುತ್ತಿದ್ದ ಮಧುಸೂದನ್ (20) ಅಪಘಾತದಲ್ಲಿ ಮೃತಪಟ್ಟ ಯುವಕ.

ಕೆಲಸ ಮುಗಿಸಿಕೊಂಡು ಸ್ನೇಹಿತ ಮಹೇಶ್ ಕುಮಾರ್ ಜತೆ ಸ್ಕೂಟರ್ ನಲ್ಲಿ ಮೈಸೂರಿಗೆ ಹಿಂದಿರುಗುವಾಗ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮಧುಸೂದನ್ ಮೃತಪಟ್ಟಿದ್ದು, ಗಾಯಗೊಂಡ ಮಹೇಶ್ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: