ಮೈಸೂರು

ಹಾಡಹಗಲೇ ಸರಸ್ವತಿಪುಂನಲ್ಲಿ ಎರಡು ಕಡೆ ಸರ ಕಸಿಯಲು ಯತ್ನ

ಮೈಸೂರು,ಏ.25-ಎರಡು ಪ್ರತ್ಯೇಕ ಘಟನೆಗಳಲ್ಲಿ ನಗರದ ಸರಸ್ವತಿಪುರಂನಲ್ಲಿ ಕಳ್ಳರಿಬ್ಬರು ಮಹಿಳೆಯರಿಂದ ಸರ ಕಸಿಯುವ ಯತ್ನ ವಿಫಲವಾಗಿದೆ. ಮಹಿಳೆಯರ ಸಮಯ ಪ್ರಜ್ಞೆಯಿಂದ ಕಳ್ಳರ ಯತ್ನ ವಿಫಲವಾಗಿದ್ದು, ಸರಗಳ್ಳರು ತಪ್ಪಿಸಿಕೊಂಡಿದ್ದಾರೆ.

ಮಂಗಳವಾರ ಸರಸ್ವತಿಪುರಂನ 5ನೇ ಮುಖ್ಯರಸ್ತೆಯಲ್ಲಿರುವ ದೊನ್ನೆ ಬಿರಿಯಾನಿ ಹೋಟೆಲ್ ಮುಂಭಾಗ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯ ಕುತ್ತಿಗೆಗೆ ಕೈ ಹಾಕಿ ಸರ ಕೀಳಲು ಯತ್ನಿಸಿದ್ದಾರೆ. ಆದರೆ ಆಕೆ ಸರವನ್ನು ಗಟ್ಟಿಯಾಗಿ ಹಿಡಿದು ಸಹಾಯಕ್ಕಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡ ಸರಗಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸರಸ್ವತಿಪುರಂನ 10ನೇ ಮುಖ್ಯರಸ್ತೆಯ 2ನೇ ಕ್ರಾಸ್ ನಲ್ಲಿರುವ ಅಂಚೆ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯ ಕತ್ತಿನಿಂದ ಸರಕೀಳಲು ಯತ್ನಿಸಿದ್ದಾರೆ. ಅವರು ಸಹ ಸರವನ್ನು ಗಟ್ಟಿಯಾಗಿ ಹಿಡಿದ ಪರಿಣಾಮ ಸರ ಕೀಳಲಾಗದೆ ಸರಗಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

ಇದೇ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ಸರಗಳ್ಳರನ್ನು ಹಿಂಬಾಲಿಸುವ ಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಪಾಲಿಕೆ ಸದಸ್ಯ ಆರ್.ಲಿಂಗಪ್ಪ ಪರಿಶೀಲನೆ ನಡೆಸಿ ಸರಸ್ವತಿಪುರಂ ಪೊಲೀಸರಿಗೆ ಮಾಹಿತಿ ನೀಡುವಲ್ಲಿ ನೆರವಾಗಿದ್ದಾರೆ. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: