ಪ್ರಮುಖ ಸುದ್ದಿಮೈಸೂರು

ಉಗ್ರರು ಭೇಟಿ ನೀಡಿದ್ದ ಸ್ಥಳಗಳ ಪರಿಶೀಲನೆ

ಮೈಸೂರು ಕೋರ್ಟ್‍ ಆವರಣದಲ್ಲಿ ಬಾಂಬ್‍ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸುಲೈಮಾನ್‍ನನ್ನು ಎನ್‍ಐಎ ತಂಡ ಶುಕ್ರವಾರದಂದು ನಗರಕ್ಕೆ ಕರೆದುಕೊಂಡು ಬಂದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆ.1ರಂದು ಕೋರ್ಟ್ ಆವರಣದಲ್ಲಿರುವ ಶೌಚಾಲಯವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಈ ಘಟನೆಗೂ ಕೆಲ ದಿನಗಳು ಮೊದಲೇ ಉಗ್ರರು ನಗರದ ಹಲವೆಡೆ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರರು ತಂಗಿದ್ದರು ಎನ್ನಲಾದ ಉದಯಗಿರಿ, ಶಾಂತಿನಗರ, ಗೌಸಿಯಾನಗರಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ಉಗ್ರರು ಭೇಟಿ ನೀಡಿದ್ದ ಕೆ.ಆರ್. ವೃತ್ತ, ದೊಡ್ಡಕೆರೆ ಮೈದಾನ, ದೇವರಾಜ ಮಾರುಕಟ್ಟೆ ಸೇರಿ ಮೊದಲಾದ ಪ್ರದೇಶಗಳಿಗೂ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯಾಯಾಲಯ ಆವರಣದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸುಲೈಮಾನ್‍ನನ್ನು ನಗರದ ವಿವಿಧೆಡೆ ವಾಹನದಲ್ಲೇ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

comments

Related Articles

error: