ಮೈಸೂರು

ಕುವೆಂಪು ಜನ್ಮೋತ್ಸವ: ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮೋತ್ಸವವನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಿದ್ದು ಇದ ಅಂಗವಾಗಿ ಶ್ರೀಮತಿ ಸಾವಿತ್ರಮ್ಮ ದೇಜಗೌ ಪರ್ಯಾಯ ಪಾರಿತೋಷಕ, ‘ಶ್ರೀರಾಮಾಯಣದರ್ಶನಂ’ ಹಾಗೂ ಗಮಕಿ ವೆಂಕಟಸುಬ್ಬಯ್ಯ ದತ್ತಿ ‘ಕುಮಾರವ್ಯಾಸ ಭಾರತ’ ಗಮಕ ಸ್ಪರ್ಧೆ ಮತ್ತು ಶ್ರೀ ಕುವೆಂಪು ಗೀತಾಗಾಯನ ಸ್ಪರ್ಧೆಗಳಿಗಾಗಿ ಸ್ಪರ್ಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧಿಗಳು ಓದಬೇಕಾದ ಸಾಲುಗಳು:

“ಶ್ರೀ ರಾಮಾಯಾಣ ದರ್ಶನಂ”ನಲ್ಲಿ ಬರುವ (ಶ್ರೀ ಸಂಪುಟಂ (ತಪಸ್ಸಿದ್ಧಿ (269 ರಿಂದ 413 ಸಾಲುಗಳು) ಲಂಕಾ ಸಂಪುಟಂ (ಅತ್ತಲಾ ದೈತ್ಯ ಸಭೆಯೊಳ್ (13 ರಿಂದ 184 ಸಾಲುಗಳು), ಹಾಗೂ ಕಿಷ್ಕಿಂದಾ ಸಂಪುಟಂ (ನೀ ಸತ್ಯವ್ರತನೆ ದಿಟಂ (309 ರಿಂದ 465 ಸಾಲುಗಳು) ಸಾಲುಗಳನ್ನು ಓದಬೇಕು.

“ಕುಮಾರವ್ಯಾಸ ಭಾರತದಲ್ಲಿ” ಸಭಾ ಪರ್ವ (ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಅಲ್ಲಿಂದ 20 ಪದ್ಯಗಳು) ಅರಣ್ಯ ಪರ್ವ ( ನುಡಿಗೆ ಬೆರಗಾದಳು ಮನೋಜ ಸಡಗರಕ್ಕೆ ತೆಕ್ಕಿದಳು ಅಲ್ಲಿಂ 20 ಪದ್ಯಗಳು) ಪದ್ಯಗಳನ್ನು ಓದಬೇಕು.

ನಿಯಮ: ಸ್ಪರ್ಧಿಗಳಿಗೆ ತಲಾ 50 ರೂಪಾಯಿ ಪ್ರವೇಶ ಶುಲ್ಕವಿದೆ. ಹೆಸರು ಹಾಗೂ ಸಂಪೂರ್ಣ ವಿಳಾಸದೊಂದಿಗೆ ಲಿಖಿತರೂಪದಲ್ಲಿ ಕಳುಹಿಸಬೇಕು, ಸ್ಥಳದಲ್ಲಿಯೂ ನೋಂದಣಿಗೆ ಅವಕಾಶವಿದೆ.

ಸಂಘ ಸಂಸ್ಥೆಗಳ ಮೂಲಕ ಹಾಗೂ ವೈಯುಕ್ತಿಕವಾಗಿ ಭಾಗವಹಿಸಬಹು.

ವಿಳಾಸ: ಕಾರ್ಯದರ್ಶಿ ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಜಯಲಕ್ಷ್ಮೀಪುರಂ, ಮೈಸೂರು ಇಲ್ಲಿ ತಲುಪಿಸಬಹುದು.

ಸ್ಪರ್ಧೆಗೆ ಪ್ರಥಮ (ರೂ.2250), ದ್ವಿತೀಯ (ರೂ.1750) ಹಾಗೂ ತೃತೀಯ (ರೂ.1250) ಬಹುಮಾನವಿದೆ. ಅದರಂತೆ ಕುವೆಂಪು ಭಾವಗೀತಾ ಗಾಯನಕ್ಕೆ ರೂ. 1250, 1000 ಹಾಗೂ 850 ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳ ಬಹುಮಾನವಾಗಿದೆ.

ಬವಾರ್–ಪ್ರಸಾದ್ ದತ್ತಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮಕ್ಕೆ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದ್ದು ನೂರು ರೂಪಾಯಿ ಪ್ರವೇಶ ಶುಲ್ಕವಿದೆ. ಪ್ರತಿ ಕಾಲೇಜಿನಿಂದ ನಾಲ್ಕು ವಿದ್ಯಾರ್ಥಿಗಳು ಭಾಗವಹಿಸಬಹುದು. ಡಿ.28ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಿ.ಎಸ್.ಶಿವಶಂಕರ, ಗಿರೀಶ್ ಮತ್ತು ಸೋಮಶೇಖರ್ C/O ಶ್ರೀವಿವೇಕಾನಂದ ಪ್ರೌಢಶಾಲೆ/ಪದವಿಪೂರ್ವ ಕಾಲೇಜು, ಜಯಲಕ್ಷ್ಮೀಪುರಂ, ಮೈಸೂರು ಇಲ್ಲಿ ಕಳುಹಿಸಬಹುದು. ಪ್ರಥಮ (ರೂ. 3500) ದ್ವಿತೀಯ (ರೂ. 2500) ಹಾಗೂ ತೃತೀಯ (ರೂ. 2000) ಬಹುಮಾನವಿದೆ.

ಡಿ. 28 ರಂದು ಬೆಳಿಗ್ಗೆ 10:30 ಕ್ಕೆ ಸ್ಪರ್ಧೆಯು ಕಾಲೇಜಿನ ಶ್ರೀವೆಂಕಣ್ಣಯ್ಯ ವೇದಿಕೆಯಲ್ಲಿ ಜರುಗುವುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

Leave a Reply

comments

Related Articles

error: