ಸುದ್ದಿ ಸಂಕ್ಷಿಪ್ತ

ಬಾಡಿಗೆ ಕಟ್ಟಡಕ್ಕೆ ಮಾಹಿತಿ ಆಹ್ವಾನ

ಮೈಸೂರು,ಏ.25-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ 100ಕ್ಕೂ ಹೆಚ್ಚು ಸಂಖ್ಯಾಬಲ ಹೊಂದಿರುವ 5 ವಿದ್ಯಾರ್ಥಿನಿಲಯಗಳನ್ನು ವಿಭಜಿಸಿ ಪ್ರತ್ಯೇಕ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಸೂಕ್ತ ಬಾಡಿಗೆ ಕಟ್ಟಡದ ಅವಶ್ಯಕತೆ ಇದೆ.

ಮೈಸೂರು ನಗರದಲ್ಲಿ ಮೂಲಭೂತ ಸೌಕರ್ಯವುಳ್ಳ ಸಾಕಷ್ಟು ಗಾಳಿ, ಬೆಳಕು, ನೀರಿನ ವ್ಯವಸ್ಥೆ, 10 ಸ್ನಾನದ ಗೃಹ, 10 ಶೌಚಾಲಯ ಹಾಗೂ 100 ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಸ್ಥಳವಕಾಶ ಇರುವ ಕಟ್ಟಡದ ಮಾಲೀಕರು ಬಾಡಿಗೆ ಕಟ್ಟಡದ ವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು,  ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 216, 2 ನೇ ಮಹಡಿ, ಮಿನಿ ವಿಧಾನಸೌಧ, ನಜರ್‍ಬಾದ್, ಮೈಸೂರು ಇವರನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: