ಕ್ರೀಡೆದೇಶ

ಡೆಲ್ಲಿ ಡೇರ್ ಡೆವಿಲ್ಸ್ ನಾಯಕತ್ವ ತ್ಯಜಿಸಿದ ಗೌತಮ್ ಗಂಭೀರ್

ನವದೆಹಲಿ,ಏ.25-ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ನಾಯಕತ್ವ ಸ್ಥಾನಕ್ಕೆ ಗುಡ್ ಬೈ ಹೇಳಿದ್ದಾರೆ.

ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆಡಿರುವ ಆರು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದ್ದು, ಕೊನೆ ಸ್ಥಾನದಲ್ಲಿದೆ. ರನ್ ರೇಟ್ ನಲ್ಲೂ ತಂಡ ಹೇಳಿಕೊಳ್ಳುವಂತಾ ಸಾಧನೆ ಮಾಡಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಗೌತಮ್ ಗಂಭೀರ್ ನಾಯಕತ್ವದಿಂದ ಕೆಳಗಿಳಿದಿದ್ದು ಯುವ ಆಟಗಾರ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಗೌತಮ್ ಗಂಭೀರ್ ಕೂಡ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಆರು ಪಂದ್ಯಗಳಿಂದ 85 ರನ್ ಗಳಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 55 ರನ್ ಸಿಡಿಸಿದ್ದು ಬಿಟ್ಟರೆ ಇನ್ಯಾವ ಪಂದ್ಯದಲ್ಲೂ 20 ರನ್ ಗಳ ಗಡಿ ದಾಟಿಲ್ಲ.

ಗೌತಮ್ ಗಂಭೀರ್ ತಮ್ಮ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಚಾಂಪಿಯನ್ ತಂಡವನ್ನಾಗಿಸಿದ್ದರು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ತಂಡವನ್ನು ಉತ್ತಮವಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. (ಎಂ.ಎನ್)

 

Leave a Reply

comments

Related Articles

error: