ಮೈಸೂರು

ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಬಗ್ಗೆ ವಿಕಲಚೇತನರಿಗೆ ಅರಿವು

ಮೈಸೂರು,ಏ.25-ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕೇಂದ್ರ ಮೈಸೂರು ವತಿಯಿಂದ ಬುಧುವಾರ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು ಇಲ್ಲಿ ಇವಿಎಂ ಮತ್ತು ವಿವಿಪಿಎಟಿ ಯಂತ್ರವನ್ನು ಬಳಸುವುದರ ಬಗ್ಗೆ ವಿಕಲಚೇತನ ಮತದಾರರಿಗೆ ಪ್ರತಿಜ್ಞಾವಿಧಿಯೊಂದಿಗೆ ಜಾಗೃತಿ ಮೂಡಿಸುವ ಒಂದು ದಿನದ ಕಾರ್ಯಗಾರ ಮತ್ತು ಮತದಾನ ಮಾಡುವುದರ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಎನ್.ಗೀತಾ, ಚುನಾವಣಾಧಿಕಾರಿಗಳು, ಡಿಡಿಆರ್‍ಸಿ ಸಿಬ್ಬಂದಿಗಳು ಹಾಗೂ ವಿಕಲಚೇತನರುಗಳು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಂ.ಎನ್)

Leave a Reply

comments

Related Articles

error: