
ಮೈಸೂರು
ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಡಿ.4ರಂದು
ಮೀಲದ್ ಸ್ಪೋರ್ಟ್ಸ್ ಮತ್ತು ವೆಲ್ ಫೇರ್ ಕೌನ್ಸಿಲ್ ವತಿಯಿಂದ ಡಿ.4ರಂದು ಕರ್ನಾಟಕ ರಾಜ್ಯ ಮಟ್ಟದ ಟೂರ್ನಮೆಂಟ್ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಹ ಕಾರ್ಯದರ್ಶಿ ಮುದಾಸಿರ್ ಅಲಿ ಖಾನ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆಸುವ ಈ ಪಂದ್ಯಾವಳಿಯು ದ್ವಿತೀಯ ಬಾರಿಗೆ ನಡೆಯುತ್ತಿದೆ. ರಾಜೀವ್ ನಗರದ 1 ನೇ ಹಂತ ನಿಮ್ರಾ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಪಂದ್ಯಾವಳಿ ಜರುಗುತ್ತದೆ. ಪ್ರಥಮ ಸ್ಥಾನ ಪಡೆದವರಿಗೆ ನಗದು/ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ 8762854505 / 9141043356 ಗೆ ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸೈಯ್ಯದ್ ಮುಜಾಹಿದ್, ಅಸ್ಲಾಂ, ಇಲಿಯಾಸ್ ಬೇಗ್, ಮುಜಾಹಿದ್, ಅಕ್ಮಲ್, ನಾಸೀರುದ್ದೀನ್ ಮಹಮ್ಮದ್ ಹಾಜರಿದ್ದರು.