
ದೇಶಪ್ರಮುಖ ಸುದ್ದಿ
ಎಲ್ಐಸಿ ನೌಕರರಿಗೂ 2 ಮತ್ತು 4ನೇ ಶನಿವಾರ ರಜೆ ಸಿಗುವ ಸಾಧ್ಯತೆ!
ನವದೆಹಲಿ (ಏ.26): ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ಗಳ ರೀತಿಯಲ್ಲಿ ಶೀಘ್ರದಲ್ಲೇ ಎಲ್ಐಸಿ ನೌಕರರೂ ಸಹ ಪ್ರತಿ ತಿಂಗಳ ಎರಡನೇ ಮತ್ತು 4ನೇ ಶನಿವಾರ ರಜೆ ಪಡೆಯುವ ಸಾಧ್ಯತೆ ಇದೆ. ಎಲ್ಐಸಿ ನೌಕರರ ಹಲವು ದಿನಗಳ ಈ ಬೇಡಿಕೆಯನ್ನು ಮಾನ್ಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದ್ದು, 2ನೇ ಮತ್ತು 4ನೇ ಶನಿವಾರ ರಜೆ ನೀಡುವ ಬೇಡಿಕೆಯೂ ಈ ಪಟ್ಟಿಯಲ್ಲಿದೆ ಎನ್ನಲಾಗಿದೆ.
ವರ್ಗಾವಣೆ ಲಿಖಿತಗಳ ಅಧಿನಿಯಮ -ನೆಗೋಷಿಯಬಲ್ ಇನ್ಸ್ಟ್ರೂಮೆಂಟ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್ಗಳ ರೀತಿಯಲ್ಲೇ ಎಲ್ಐಸಿ ನೌಕರರೂ ರಜೆ ಪಡೆಯಲು ಅನುವಾಗುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ತಿಂಗಳ ಎರಡು ಶನಿವಾರ ಎಲ್ಐಸಿ ಕಚೇರಿಗಳು ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಬಾಕಿ ಉಳಿದ ಶನಿವಾರಗಳಂದು ಪೂರ್ಣಾವಧಿಯಲ್ಲಿ ತೆರೆಯಲಿವೆ ಎಂದು ಮೂಲಗಳು ತಿಳಿಸಿವೆ. (ಎನ್.ಬಿ)