ಮೈಸೂರು

ರಾಜ್ಯ ಮಟ್ಟದ ಕವಿಗೋಷ್ಠಿ ಡಿ.4ರಂದು

ಸಮರ್ಪಣಾ ಫೌಂಡೇಶನ್ ವತಿಯಿಂದ ಡಿ.4 ರಂದು ಮಧ್ಯಾಹ್ನ 3 ಗಂಟೆಗೆ ಅಗ್ರಹಾರದ ಜೆಎಸ್ಎಸ್ ರಾಜೇಂದ್ರ ಸಭಾ ಭವನದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ‍್ಯಕ್ಷ ಯತೀಶ್ ಕುಮಾರ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ನಾಡು-ನುಡಿ-ಜಲ-ನೆಲ-ಭಾಷೆ ಕುರಿತ ರಾಜ್ಯ ಮಟ್ಟದ ಕವಿಗೋಷ್ಠಿಯನ್ನು ನಡೆಸಲು ತೀರ್ಮಾನಿಸಿ, ರಾಜ್ಯದ 300 ರಿಂದ 400 ಉದಯೋನ್ಮುಖ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿ ಅದರಲ್ಲಿ ಅತ್ಯುತ್ತಮವಾದ ನೆಲ ಜಲದ ಸಮಸ್ಯೆ ಮತ್ತು ಪರಿಹಾರ ಹೊಂದಿರುವ ಸುಮಾರು 150 ಕವಿತೆಗಳನ್ನು   ಮೈಸೂರು ವಿವಿಯ ಹಿರಿಯ ಪ್ರಾಧ‍್ಯಾಪಕ ಪ್ರೊ.ಮಲೆಯೂರು ಗುರುಸ್ವಾಮಿಯವರ ಅಧ‍್ಯಕ್ಷತೆಯ ಸಮಿತಿಯು ಆಯ್ಕೆ ಮಾಡಿದೆ ಎಂದು ಹೇಳಿದರು.

ಅಂದು ಸುಮಾರು 150 ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿ ಬನ್ನೂರು ರಾಜು ಮತ್ತು ಸವಿಗನ್ನಡ ಪತ್ರಿಕೆಯ ಸಂಪಾದಕ ರಂಗನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕವನ ವಾಚನಕ್ಕೆ ಆಗಮಿಸಿದ ಪ್ರತಿಯೊಬ್ಬ ಉದಯೋನ್ಮುಖ ಕವಿಗೂ ಸಮರ್ಪಣ ಫೌಂಡೇಶನ್ ಮತ್ತು ಕೆ.ವಿ.ಎಸ್.ಟ್ರಸ್ಟ್ ಸಹಯೋಗದ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9632321210 / 9008496992 ಅನ್ನು ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ಸುನಿಲ್ ಕುಮಾರ್, ನಿರ್ದೇಶಕ ಮಧುಕೇಶವ್ ಮತ್ತು ವೆಂಕಟೇಶ್ ಹಾಜರಿದ್ದರು.

Leave a Reply

comments

Related Articles

error: