
ಮೈಸೂರು
ಆದಿವಾಸಿ ಮುಖಂಡ ಬಿರ್ಸಾಮುಂಡಾ ಜಯಂತ್ಯುತ್ಸವ ಡಿ.4ರಂದು
ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ವತಿಯಿಂದ ಡಿ.4ರಂದು ಬೆಳಗ್ಗೆ 11 ಗಂಟೆಗೆ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನಲ್ಲಿ ಸ್ವಾತಂತ್ರ್ಯಯೋಧ- ಆದಿವಾಸಿ ಮುಖಂಡ ಬಿರ್ಸಾಮುಂಡಾ ಜಯಂತ್ಯುತ್ಸವ ಮತ್ತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾಮಣ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಸಚಿವ ಎಂ.ಶಿವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರಾಭಿವೃದ್ಧಿ ಅಧ್ಯಕ್ಷ ಧೃವಕುಮಾರ್ ಬಿರ್ಸಾಮುಂಡರವರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಎಂ.ಅಂಜನಮೂರ್ತಿ ಮತ್ತು ಲಕ್ಷ್ಮೀ ಶ್ರೀನಿವಾಸ್ ಹಾಜರಿದ್ದರು.