ಕರ್ನಾಟಕಪ್ರಮುಖ ಸುದ್ದಿ

ನಟಿ ರಕ್ಷಿತಾ ಸಹೋದರ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿ

ಬೆಂಗಳೂರು (ಏ.27): ಹ್ಯಾಂಡ್ ಸಮ್, ಸಿಕ್ಸ್ ಪ್ಯಾಕ್ ಬಾಡಿ, ಒಳ್ಳೆ ಹೈಟು ಇರುವ ನಟಿ ರಕ್ಷಿತಾ ಅವರ ಸಿಕ್ಸ್ ಪ್ಯಾಕ್  ಸಹೋದರ ಸದ್ಯದಲ್ಲೇ ಸ್ಯಾಂಡಲ್’ವುಡ್’ನಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ.

ಹೆಸರು ಅಭಿಷೇಕ್. ಕನ್ನಡ ಚಿತ್ರರಂಗದ ಕ್ರೇಜಿಕ್ವೀನ್, ಸುಂಟರಗಾಳಿ ರಕ್ಷಿತಾ ಅವರ ಪ್ರೀತಿಯ ಸಹೋದರ. ಚಂದನವನಕ್ಕೆ ಬರುವ ತಯಾರಿಯಲ್ಲಿರುವ ಅಭಿಷೇಕ್ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಅಭಿಶೇಕ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿದೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ದಿ ವಿಲನ್’ ಚಿತ್ರದಲ್ಲಿ ಅಭಿಶೇಕ್ ಕೆಲಸ ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಬಳಿ ಸಹಾಯಕ ನಿರ್ದೇಶಕನಾಗಿ ಅಭಿಶೇಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ನ್ಯೂಯಾರ್ಕ್ ನ ‘ಲೀ ಸ್ಟ್ರಾಸ್ಬರ್ಗ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದಿರುವ ಅಭಿಷೇಕ್, ಸಿನಿಮಾ ಮೇಕಿಂಗ್ ಕುರಿತ ಎಲ್ಲ ವಿಚಾರಗಳನ್ನು ಪ್ರೇಮ್ ಬಳಿ ‘ದಿ ವಿಲನ್’ ಸೆಟ್ ನಲ್ಲಿ ಕಲಿತಿದ್ದಾರೆ. ಆದ್ರೆ, ಹೀರೋ ಆಗಿ ಬೆಳ್ಳಿತೆರೆ ಪ್ರವೇಶ ಮಾಡುವುದಷ್ಟೇ ಬಾಕಿ.

ನಟನೆಗೆ ಸಂಬಂಧಪಟ್ಟಂತೆ ಸುದೀಪ್ ಹಾಗೂ ಶಿವಣ್ಣ ಅವರಿಂದ ಸಲಹೆಗಳನ್ನೂ ಪಡೆದುಕೊಂಡಿದ್ದಾರಂತೆ ಅಭಿಷೇಕ್. ‘ದಿ ವಿಲನ್’ ಶೂಟಿಂಗ್ ಮುಗಿದ ಬಳಿಕ ರಕ್ಷಿತಾ ಪ್ರೇಮ್ ಬ್ಯಾನರ್ ಅಡಿಯಲ್ಲೇ ಅಭಿಶೇಕ್ ಹೀರೋ ಆಗಿ ಲಾಂಚ್ ಆಗಲಿದ್ದಾರೆ. ಈ ಕ್ಷಣಕ್ಕಾಗಿ ಸ್ವತಃ ರಕ್ಷಿತಾ ಅವರು ಕಾಯುತ್ತಿದ್ದಾರೆ ಎಂಬುದನ್ನ ಇತ್ತೀಚಿಗಷ್ಟೆ ‘ನಂ. 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. (ಎನ್.ಬಿ)

Leave a Reply

comments

Related Articles

error: