
ಮೈಸೂರು
ನಾಮಪತ್ರ ಹಿಂಪಡೆದ ಎಂ.ಲಕ್ಷ್ಮೀಕಾಂತ
ಮೈಸೂರು,ಏ.26-2018ರ ವಿಧಾನಸಭಾ ಚುನಾವಣೆಗೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 197 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 14 ಅಭ್ಯರ್ಥಿಗಳ ನಾಮಪತ್ರ ಬುಧವಾರ ತಿರಸ್ಕೃತಗೊಂಡಿತ್ತು. ಇದೀಗ ಇಂದು (ಗುರುವಾರ) ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮೀಕಾಂತ ನಾಮಪತ್ರವನ್ನು ಹಿಂಪಡೆದಿದ್ದಾರೆ. ಈಗ 182 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದೆ. (ಕೆ.ಎಸ್, ಎಂ.ಎನ್)