ಮೈಸೂರು

‘ಕ್ರಿಯೇಷನ್ ಆಫ್ ಕ್ರಿಯೇಷನ್’ ಪ್ರತಿಮೆ ಅನಾವರಣ

1972ರ ವಾಸ್ತುಶಿಲ್ಪ ಕಾಯಿದೆಯಲ್ಲಿ ಬಹಳಷ್ಟು ಲೋಪಗಳಿದ್ದು, ಆ ಕಾಯಿದೆಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಆರ್ಕಿಟೆಕ್ಚರ್ ಮಂಡಳಿ ನವದೆಹಲಿ ಅಧ್ಯಕ್ಷ ಬಿಸ್ವಾ ರಾಜನ್ ನಾಯಕ್ ಅಭಿಪ್ರಾಯಪಟ್ಟರು.

ಅವರು ಮೈಸೂರು ಆವರಣದಲ್ಲಿ ನಿರ್ಮಿಸಲಾದ ‘ಕ್ರಿಯೇಷನ್ ಆಫ್ ಕ್ರಿಯೇಷನ್’ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ಪ್ರಸ್ತುತ ಒಂದೇ ತರಬೇತಿ ಸಂಸ್ಥೆಯಿದ್ದು, ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವುದು ಕಷ್ಟವಾಗಿದೆ. ಕೌನ್ಸಿಲ್ ಇನ್ನಷ್ಟು ತರಬೇತಿ ಸಂಸ್ಥೆಗಳನ್ನು ತೆರೆಯಲು ಚಿಂತನೆಯನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕೆ ಎಲ್ಲ ಶಾಲೆಗಳಿಗೂ ಇ-ಲೈಬ್ರರಿ ವ್ಯವಸ್ಥೆ ಮಾಡುವ ಯೋಚನೆಯೂ ಇದೆ ಎಂದರು.

‘ಕ್ರಿಯೇಷನ್ ಆಫ್ ಕ್ರಿಯೇಷನ್’ ಪ್ರತಿಮೆಯನ್ನು ನಿರ್ಮಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಆರ್. ರಾಜಣ್ಣ, ಎಸ್‍ಪಿಎ ಸ್ಥಾಪಕ ನಿರ್ದೇಶಕ ಪ್ರೊ. ಕೃಷ್ಣೇ ಗೌಡ ಮತ್ತು ಇತರರು ಉಪಸ್ಥಿತರಿದ್ದರು.

‘ಕ್ರಿಯೇಷನ್ ಆಫ್ ಕ್ರಿಯೇಷನ್’: ಮೈಸೂರು ವಿವಿ ಆವರಣದಲ್ಲಿ ಜನ್ಮ ತಾಳಿರುವ ಗಸ್ಟವ್ ವಿಜಿಲ್ಯಾಂಡ್ ಅವರ ಪರಿಕಲ್ಪನೆಯ ಪ್ರತಿರೂಪದ ಪ್ರತಿಮೆಗೆ ‘ಕ್ರಿಯೇಷನ್ ಆಫ್ ಕ್ರಿಯೇಷನ್’ ಎಂದು ನಾಮಕರಣ ಮಾಡಲಾಗಿದೆ. ಎರಡು ಜೀವಗಳ ಸಂಗಮದಿಂದ ಮತ್ತೊಂದು ಜೀವದ ಉಗಮವಾಗುವ ನಿಸರ್ಗದ ಕೊಡಗೆ ಅಪಾರ ಎಂಬ ಪರಿಕಲ್ಪನೆ ಈ ಶೀರ್ಷಿಕೆಯಲ್ಲಿ ಅಡಗಿದೆ. ಮೈಸೂರಿನ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಅವರ ಕೈಚಳಕದಲ್ಲಿ ಈ ಶಿಲ್ಪ ಮೂಡಿಬಂದಿದೆ.

mysore-vv-2

Leave a Reply

comments

Related Articles

error: