ಮೈಸೂರು

ಟಿಕೆಟ್ ಕೈ ತಪ್ಪಿದ ಹಿನ್ನೆಲೆ: ಬಿಎಸ್ವೈ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ವಿಜಯೇಂದ್ರ ಬೆಂಬಲಿಗರು

ಮೈಸೂರು,ಏ.27-ವರುಣಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಬಿಜೆಪಿ ಕೆಲ ಕಾರ್ಯಕರ್ತರು ಹಾಗೂ ವಿಜಯೇಂದ್ರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಸ್ವಂತ ಮಗನಿಗೆ ವರುಣಾದಿಂದ ಟಿಕೆಟ್ ಕೊಡಿಸಲಾಗದ ಮೇಲೆ ನೀನ್ಯಾವ ಮುಖ್ಯಮಂತ್ರಿಯಾಗುತ್ತೀಯಾ? ಜನರ ಅಭಿವೃದ್ಧಿ ಏನು ಮಾಡುತ್ತೀಯಾ? ಎಂದು ನಿಂದಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಅಲ್ಲದೆ, ಸಚಿವ ಅನಂತ್ ಕುಮಾರ್ ಹೆಗಡೆ, ಸದಾನಂದ ಗೌಡ ಸೇರಿದಂತೆ ಬಿಜೆಪಿ ಹಿರಿಯ ನಾಯಕರನ್ನು ಚಪ್ಪಲಿ ತೋರಿಸಿ ನಿಂದಿಸಿದ್ದಾರೆ. ವಿಜಯೇಂದ್ರ ಅವರನ್ನು ಮರಿಹುಲಿ ರೀತಿ ನೋಡಿಕೊಂಡಿದ್ದೆವು. ಆದರೆ ಅವರದ್ದೇ ಪಕ್ಷದವರು ಈಗ ವಿಜಯೇಂದ್ರ ಅವರನ್ನು ಇಲಿ ಮಾಡಿಬಿಟ್ಟರು. ಎಲ್ಲವನ್ನು ಆಳು ಮಾಡಿಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: