ಮೈಸೂರು

ವ್ಯಾಪಾರಿ ಗಮನ ಬೇರೆಡೆಗೆ ಸೆಳೆದು: 60 ಸಾವಿರ ರೂ. ಎಗರಿಸಿದ ಕಳ್ಳ

ಮೈಸೂರು,ಏ.27-ವ್ಯಾಪಾರಿಯೊಬ್ಬರ ಗಮನವನ್ನುಬೇರೆಡೆಗೆ ಸೆಳೆದು ಯುವಕನೊಬ್ಬ ಅವರ ಜೇಬಿನಲ್ಲಿದ್ದ 60 ಸಾವಿರ ರೂ. ನಗದನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಸಂತೇಪೇಟೆಯಲ್ಲಿ ನಡೆದಿದೆ.

ನಗರದ ಎನ್.ಆರ್.ಮೊಹಲ್ಲಾದ ನಿವಾಸಿ ಮಹಮದ್ ಅಕ್ರಂ ಹಣ ಕಳೆದುಕೊಂಡವರು. ಮಹಮದ್ ತಮ್ಮ ಜ್ಯೂಸ್ ಮಳಿಗೆಗೆ ವಸ್ತುಗಳನ್ನು ಖರೀದಿಸಲು ಏ.23 ರಂದು ನಗರದ ಸಂತೇಪೇಟೆಯಲ್ಲಿರುವ ಮೈಸೂರು ಎಂಟರ್ ಪ್ರೈಸಸ್ ಅಂಗಡಿಗೆ ಬಂದಿದ್ದರು.

ಈ ವೇಳೆ ಅಪರಿಚಿತ ಯುವಕನೊಬ್ಬ ಮಹಮದ್ ಅವರ ಗಮನವನ್ನು ಬೇರೆಡೆಗೆ ಸೆಳೆದು ಅವರ ಬಳಿಯಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: