ಕರ್ನಾಟಕಮೈಸೂರು

ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಹೊಸ ನೋಟುಗಳ ವಶ: ಸ್ವಯಂ ತನಿಖೆಗಿಳಿದ ಸಿಬಿಐ

ಗುರುವಾರ ಬೆಂಗಳೂರಿನಲ್ಲಿ ಸಿ.ಎಂ. ಆಪ್ತ ಕಾವೇರಿ ನೀರಾವರಿ ನಿಗಮದ ಎಂ.ಡಿ. ಚಿಕ್ಕರಾಯಪ್ಪ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಗಮ ಮುಖ್ಯಾಧಿಕಾರಿ ಜಯಚಂದ್ರ ಅವರುಗಳ ಮನೆ ಮೇಲೆ ದಾಳಿ ಮಾಡಿ 5.7 ಕೋಟಿ ರೂಪಾಯಿ ಹೊಸ ನೋಟುಗಳ ನಗದು ವಶಪಡಿಸಿಕೊಳ್ಳಲಾಗಿದೆ. ಇದು ಮಾತ್ರವಲ್ಲದೆ ಲ್ಯಾಂಬೊರ್ಗಿನಿ, ವೋಲ್ವೋ, ಎಂ.ವಿ. ಅಗಸ್ಟಾ, ಡ್ಯುಕಾಟಿ 749, ಹಲವು ಲಕ್ಸುರಿ ಅಪಾರ್ಟ್ಮೆಂಟ್ಸ್, 16 ಕೆ.ಜಿ.ಯಷ್ಟು ಚಿನ್ನಾಭರಣ, 90 ಲಕ್ಷ ರೂ.ಗಳಷ್ಟು ಹಳೆಯ ನಗದು ಕೂಡ ಇವರ ಆಸ್ತಿಯಲ್ಲಿ ಸೇರಿವೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಹೊಸ ನೋಟುಗಳು ಬಂದಿದ್ದು ಎಲ್ಲಿಂದ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಿಬಿಐ ಸ್ವಪ್ರೇರಣೆಯಿಂದ ಪರಿಶೀಲಿಸಲು ಆರಂಭಿಸಿದ್ದು ಪ್ರಮುಖ ಆರೋಪಿಗಳ ಸಂಪರ್ಕಗಳನ್ನು ಜಾಲಾಡುವ ಮೂಲಕ  ಪತ್ತೇ ಕಾರ್ಯ ಆರಂಭಿಸಿದ್ದಾರೆ.

ನೋಟುಗಳನ್ನು ತಮಿಳುನಾಡಿನ ಈರೋಡ್, ಮೈಸೂರು ಹಾಗೂ ಬೆಂಗಳೂರಿನ ಬ್ಯಾಂಕ್‍ಗಳಿಂದ ಡ್ರಾ ಮಾಡಲಾಗಿದೆ ಎನ್ನಲಾಗಿದ್ದು, ಅಂತಾರಾಜ್ಯ ವ್ಯಾಪ್ತಿಗೆ ಒಳಪಟ್ಟ ಪ್ರಕರಣವಾಗಿರುವುದರಿಂದ ಸಿಬಿಐ ಅಧಿಕಾರಿಗಳು ಸ್ವಪ್ರೇರಣೆಯಿಂದ ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ತನಿಖಾ ಕಾರ್ಯವನ್ನು ಚುರುಕುಗೊಳಿಸಿದ್ದು ಬ್ಯಾಂಕ್‍ ಖಾತೆಗಳನ್ನು ಪತ್ತೆ ಮಾಡಿದ್ದಾರೆ.

ಚಂದ್ರಕಾಂತ ಎನ್ನುವ ವ್ಯಕ್ತಿಯ ಖಾತೆಯಿಂದ ನೋಟುಗಳನ್ನು ಡ್ರಾಮಾಡಲಾಗಿದೆ ಎನ್ನಲಾಗಿದ್ದು, ಚಂದ್ರಕಾಂತ್ ರಾಮಲಿಂಗಂ ಕನ್ಸ್’ಟ್ರಕ್ಷನ್ ಕಂಪನಿಯ ಹೆಸರಿನ ಖಾತೆಗೆ ಹಳೆಯ ನೋಟು ನೀಡಿ ಹೊಸ ನೋಟು ವಿನಿಮಯವಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಅವರಿಗೆ ಸಂಬಂಧಿಸಿದ ಎಲ್ಲ ಖಾತೆಗಳನ್ನು ಸಿಬಿಐ ಪರಿಶೀಲಿಸುತ್ತಿದೆ. ಚಂದ್ರಕಾಂತ್ ಅವರ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಿದ್ದು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: