ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ: ವಾಮಾನ ಚಾರ್ಯ ಟೀಕೆ

ಕೈ ಪಕ್ಷ ಸೋಲುವುದು ಖಾತರಿ ಎಂದ ಬಿಜೆಪಿ ಮುಖಂಡ

ಮೈಸೂರು (ಏ.27): ಹೇಳೋದೊಂದು ಮಾಡೋದೊಂದು ಮಾಡುವ ಸರ್ಕಾರ, ಕಳೆದ ಬಾರಿ ನೀಡಿದ ಆಶ್ವಾಸನೆಯನ್ನೇ ಈಡೇರಿಸಿಲ್ಲ ಈಗ ಮತ್ತೊಂದು ಸುಳ್ಳಿನ ಕಂತೆಯ ಪ್ರಣಾಳಿಕೆ ಬಿಡುಗಡೆಗೊಳಿಸಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ವಕ್ತಾರ ಡಾ.ವಾಮನಾಚಾರ್ಯ ಟೀಕೆ ಮಾಡಿದರು.

ಮಂಗಳೂರಿನಲ್ಲಿ ಇಂದು ಬಿಡುಗಡೆಯಾದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಗ್ಗೆ ಟೀಕಾ ಪ್ರಹಾರ ನಡೆಸಿದ ಅವರು, ಹವಾಕಾ ಸರದಾರ ರಾಹುಲ್ ಗಾಂಧಿ ಅಣತಿಯಂತೆ  ಸುಳ್ಳಿನ ಸರದಾರ ಮಾಜಿ ಸಿಎಂ ವೀರಪ್ಪ ಮೊಯ್ಲಿ, ನಿದ್ದೆ ಸರದಾರ ಸಿಎಂ ಸಿದ್ದರಾಮಯ್ಯ ಸೇರಿ ಬಿಡುಗಡೆ ಮಾಡಿದ ಪ್ರಣಾಳಿಕೆ ಹೇಗಿರಬಹುದು ಎಂದು ಜನತೆ ಊಹಿಸಬಹುದು. ಕಳೆದ ಬಾರಿ ನೀಡಿದ 200 ಆಶ್ವಾಸನೆಗಳಲ್ಲಿ ಕೇವಲ 40 ಮಾತ್ರ ಈಡೇರಿದ್ದು, ಅವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳೇ, ಅನ್ನಭಾಗ್ಯ ಯೋಜನೆಯೂ ಕೇಂದ್ರ ಸರ್ಕಾರದ್ದೇ, ರಾಜ್ಯಕ್ಕೆ 3 ರೂಪಾಯಿಗೆ ನೀಡುವ ಅಕ್ಕಿಯನ್ನು ಅದಕ್ಕೊಂದು ತಮ್ಮ ಭಾವಚಿತ್ರ ಅಂಟಿಸಿ ನೀಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಪ್ರಣಾಳಿಕೆಯ ಪ್ರಕಾರ ಕಾಂಗ್ರೆಸ್ ಗೆ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಖಚಿತವಾಗಿದೆ, ಅದರಲ್ಲಿ ಅಂಕೆ ಸಂಖ್ಯೆ ಬಿಟ್ಟರೆ ಮತ್ತೇನ್ನಿಲ್ಲ. ಲೋಕಾಯುಕ್ತವನ್ನು ಮುಚ್ಚಿದ ಭ್ರಷ್ಟ ಸರ್ಕಾರ, ರೈತರಷ್ಟೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ತಾಯಿ –ಮಗುವಿನ ಸಾವಿನ ಪ್ರಮಾಣ ರಾಜ್ಯದಲ್ಲಿ ಹೆಚ್ಚಿದೆ ಎಂದರು.

50 ಸಾವಿರ ಕೋಟಿ ರೂ.ಗಳಲ್ಲಿ ಕೃಷ್ಣ ಯೋಜನೆಯನ್ನು ಅಂತ್ಯಗೊಳಿಸುತ್ತೇವೆ ಎಂದು ನೀಡಿದ್ದ ಆಶ್ವಾಸನೆ ಕೇವಲ ಕೆನಾಲ್ ನಿರ್ಮಾಣಕ್ಕೆ ಸೀಮಿತವಾಗಿದೆ. ಸರ್ಕಾರ ನಿರ್ಮಿಸಿದ ಮನೆಗಳು ಯಾವ ಜಿಲ್ಲೆಗಳಲ್ಲಿವೆ ಎಂದು ಹುಡುಕಿದರು ಸಿಗುವುದಿಲ್ಲ. ಕಳೆದ ಬಾರಿಯ ಆಶ್ವಾಸನೆಗಳೇ ಈಡೇರಿಸಿಲ್ಲ, ಇನ್ನೂ ಹೆಚ್ಚಿನ 100 ಆಶ್ವಾಸನೆ ನೀಡಿದೆ ಎಂದು ತಿಳಿಸಿದರು.

ಜಿಎಸ್ಟಿಯನ್ನು ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕು, ಪ್ರೆಟ್ರೋಲ್ ಮೇಲಿನ ಜಿಎಸ್ಟಿಯೂ ಆಯಾಯ ರಾಜ್ಯಕ್ಕೆ ಅನ್ವಯವಾಗಲಿದ್ದು ಆಗ ಬೆಲೆಯಲ್ಲಿ ತುಸು ಕಡಿಮೆಯಾಗುವುದು,  ಬಿಜೆಪಿ-ಜೆಡಿಎಸ್ ಒಳ ಹೊಂದಾಣಿಕೆ ಮಾಡಿಕೊಂಡಿಲ್ಲ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಶ್ರಮಿಸುತ್ತಿದ್ದು, ಈ ಹಿನ್ನಲೆಯಲ್ಲಿಯೇ ನಮ್ಮ ವಿರೋಧ ಪಕ್ಷ ಕಾಂಗ್ರೆಸೇ ಹೊರತು ಅನ್ಯ ಪಕ್ಷಗಳಲ್ಲ.

ಉದ್ಯೋಗ ಸೃಷ್ಟಿ ಪ್ರಶ್ನೆಗೆ ಉತ್ತರಿಸಿ, ಸರ್ಕಾರಿ ನೌಕರಿ ನೀಡುವುದಲ್ಲ, ಉದ್ಯೋಗವಕಾಶ ವಾತಾವರಣ ದೇಶದಲ್ಲಿ ನಿರ್ಮಿಸಲಾಗಿದೆ, ಸಣ್ಣ ಯೋಜನೆಗಳಲ್ಲಿ ಈ ವರ್ಷದಲ್ಲಿಯೇ 1 ಕೋಟಿ ಉದ್ಯೋಗ ನೀಡಿದ್ದು, ಮುಂದಿನ ಚುನಾವಣೆಯೊಳಗೆ ಉದ್ಯೋಗ ಸೃಷ್ಟಿ ಆಶ್ವಾಸನೆ ಈಡೇರಿಸಲಾಗುವುದು.

ಮಾಧ್ಯಮ ವಕ್ತಾರ  ಮಹೇಶ್, ಸಾಮಾಜಿಕ ಜಾಲತಾಣದ ಉಸ್ತುವಾರಿ ರಾಕೇಶ್, ಡಾ.ಪ್ರಸನ್ನ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: