ಮೈಸೂರು

ಕಾಂಗ್ರೆಸ್‍ಗೆ ಸವಿತಾ ಸಮಾಜದ ಬೆಂಬಲ: ಕೆಪಿಸಿಸಿ ಓಬಿಸಿ ಉಪಾಧ್ಯಕ್ಷ ಎಂ.ಎಸ್.ಮುತ್ತುರಾಜ್

ಮೈಸೂರು (ಏ.27): ರಾಜ್ಯದಲ್ಲಿ ಪದವೊಂದನ್ನು ಬಳಸಿ ಸವಿತಾ ಸಮಾಜವನ್ನು ಅಪಮಾನಿಸುತ್ತಿದ್ದುದನ್ನು ತಡೆದುದು, ಸಮಾಜದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಮತ್ತು ಸವಿತಾ ಸಮಾಜದ ಮುಖಂಡ ಎಂ.ಎಸ್. ಮುತ್ತುರಾಜ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಭರವಸೆ ನೀಡಿದ್ದಂತೆ ಸಿದ್ದರಾಮಯ್ಯ ಅವರು ಸವಿತಾ ಸಮಾಜದ ಅಭಿವೃದ್ಧಿಗಾಗಿ ೨೫ ಕೋಟಿ ನೀಡಿದ್ದಾರೆ. ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ೧.೨೦ ಎಕರೆ ಜಮೀನು ನೀಡಿದ್ದಾರೆ. ಡಿ. ದೇವರಾಜ ಅರಸು ಅಭಿವೃದ್ಧಿ ನಿಮಗದಿಂದ ಸಮುದಾಯದವರಿಗೆ ಕ್ಷೌರಿಕ ಅಂಗಡಿ ತೆರೆಯಲು ಸಹಾಯಧನ, ಉಚಿತವಾಗಿ ಕ್ಷೌರಿಕ ಸಲಕರಣೆ, ಉಚಿತ ಡೋಲು, ನಾದಸ್ವರ ನೀಡಿಕೆ, ಹಡಪದ ಹಪ್ಪಣ್ಣ ಜಯಂತಿ ಆಚರಣೆ ಮೊದಲಾದ ಕ್ರಮ ಕೈಗೊಂಡಿದ್ದಾರೆ.

ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕೆಂದು ಕೋರಿ ರಾಜ್ಯದ ಎಲ್ಲ ಸಲೂನ್‌ಗಳಲ್ಲಿ ಭಿತ್ತಿಪತ್ರ ಅಂಟಿಸುವುದು, ಮೊದಲಾದ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು. ವಿ. ಮಂಜುನಾಥ್, ಎನ್.ಆರ್. ನಾಗೇಶ್, ಇತರರು ಇದ್ದರು. (ವರದಿ: ಕೆ.ಎಂ.ಆರ್)

Leave a Reply

comments

Related Articles

error: