ಕರ್ನಾಟಕ

ಚಾಮರಾಜನಗರದ ಮೂರು ಕ್ಷೇತ್ರಗಳಲ್ಲಿ ವಿಜಯೇಂದ್ರ ಪ್ರಚಾರ

ಮೈಸೂರು(ಏ.28): ವರುಣಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ನಂತರ ಮೊದಲ ಬಾರಿಗೆ ಬಿಎಸ್‍ವೈ ಪುತ್ರ ಬಿ.ವೈ ವಿಜಯೇಂದ್ರ ಅವರು ಇಂದು ಚಾಮರಾಜನಗರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಕೊಳ್ಳೆಗಾಲ, ಹನೂರು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ವಿಜಯೇಂದ್ರ ಪ್ರಚಾರ ನಡೆಸುತ್ತಿದ್ದಾರೆ. ವರುಣಾ ಟಿಕೆಟ್ ತಪ್ಪಿದ ಮೇಲೆ ಕಾರ್ಯಕರ್ತರ ಜೊತೆ ಕಾಣಿಸಿಕೊಳ್ಳದ ವಿಜಯೇಂದ್ರ ಬೆಂಗಳೂರಿಗೆ ತೆರಳಿದ್ದರು. ಟಿಕೆಟ್ ಕೈತಪ್ಪಿದ್ದರೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ವಿಜಯೇಂದ್ರ ತಿಳಿಸಿದ್ದರು.

ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಆಕ್ರೋಶದಲ್ಲಿ ವರುಣಾದಲ್ಲಿ ಇನ್ನೂ ನೋಟಾ ಅಭಿಯಾನ ಮುಂದುವರೆದಿದೆ. ಭಾನುವಾರ ನೋಟಾ ಬೆಂಬಲಿಸಿ ಬೈಕ್ ಜಾಥಾ ನಡೆಯಲಿದೆ ಎಂದು ಹೇಳಲಾಗಿದೆ. (ಎನ್.ಬಿ)

Leave a Reply

comments

Related Articles

error: