ಮೈಸೂರು

ವೇತನ ಪಾವತಿಸಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ಪೌರಕಾರ್ಮಿಕ

ಮೈಸೂರು,ಏ.28-ಸುಮಾರು ಎಂಟು ತಿಂಗಳಿನಿಂದ ವೇತನ ನೀಡಿಲ್ಲವೆಂದು ಗುತ್ತಿಗೆ ಪೌರಕಾರ್ಮಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ 18ನೇ ವಾರ್ಡ್ ನ ಗುತ್ತಿಗೆ ಪೌರಕಾರ್ಮಿಕ ಸತ್ಯನಾರಾಯಣ (28) ಆತ್ಮಹತ್ಯೆಗೆ ಯತ್ನಿಸಿದವರು. ನಗರಪಾಲಿಕೆಯ ಗುತ್ತಿಗೆದಾರ ತಮ್ಮಣ್ಣ ಎಂಟು ತಿಂಗಳಿಂದ ವೇತನ ನೀಡಿಲ್ಲವೆಂದು ಸತ್ಯನಾರಾಯಣ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಸಂಚಾಲಕರುಗಳಾದ ಕೆ.ನಂಜಪ್ಪ ಬಸವನಗುಡಿ, ಜೆ.ಪಿ.ನಗರದ ವಿ.ಗಣೇಶ್ ಆತ್ಮಹತ್ಯೆಗೆ ಯತ್ನಿಸಿರುವ ಸತ್ಯನಾರಾಯಣ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುತ್ತಿಗೆದಾರ ತಮ್ಮಣ್ಣ ನನ್ನು ಬಂಧಿಸುವಂತೆ ಅಶೋಕ್ ಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: