ಮೈಸೂರು

ಮೇ 1ರಿಂದ ‘ನರ್ತನ ನಿರಂತರ’ – ಅಂತಾರಾಷ್ಟ್ರೀಯ ನೃತ್ಯ ಕಾರ್ಯಕ್ರಮ

ಮೈಸೂರು (ಏ.28): ಭರತಾಂಜಲಿ ನೃತ್ಯ ಮತ್ತು ಯೋಗ ಶಾಲೆ ವತಿಯಿಂದ ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯ ಪ್ರಯುಕ್ತ ಮೂರು ದಿನಗಳ ನೃತ್ಯ ಹಬ್ಬ ‘ನರ್ತನ ನಿರಂತರ’ ಹಾಗೂ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಸಂಸ್ಥೆಯ ಉಪಾಧ್ಯಕ್ಷ ಡಾ.ಶೀಲಾ ಶ್ರೀಧರ್ ಅವರು, ಮೇ 1 ರಿಂದ 3ರ ವರೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಂತರಾಷ್ಟ್ರೀಯ ನೃತ್ಯಗಾರರಾದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಮೇ.1ರ ಮಧ್ಯಾಹ್ನ 3 ಗಂಟೆಗೆ ನಡೆಯುವ ಉದ್ಘಾಟನೆಯಲ್ಲಿ ಹಿರಿಯ ಕಲಾವಿದ ಮಂಡ್ಯ ರಮೇಶ್, ಭರತಾಂಜಲಿಯ ಅಧ್ಯಕ್ಷ ಕೆ.ವಿ.ಮೂರ್ತಿ, ವಿಶೇಷ ಅತಿಥಿಗಳಾಗಿ ಜಯಚಂದ್ರ ಇರುವರು. ನಂತರ ವಿದುಷಿ ಅಪರ್ಣಾ ಶರ್ಮಾ, ವಿದುಷಿ ಮಹಾಲಕ್ಷ್ಮೀ, ವಿದುಷಿ ಡಾ.ಮಂಗಳ ಶೇಖರ್, ಸವಿತಾ ಗೋಪಾಲಕೃಷ್ಣ ನೃತ್ಯ ಪ್ರದರ್ಶನ ನೀಡುವರು. ಹಾಗೂ ಎರಡು ದಿನಗಳ ಕಾಲ ಸಂಜೆ 5.30ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಹಲವಾರು ವಿದ್ವಾಂಸರು ಶಾಲೆಯ (ಹಳೆಯ) ವಿದ್ಯಾರ್ಥಿಗಳು ಹಾಗೂ ಸಮಾರೋಪದಲ್ಲಿ ತಾವು ಶಾಸ್ತ್ರೀಯ ಭರತನಾಟ್ಯ ನೃತ್ಯ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಅಂತರಾಷ್ಟ್ರೀಯ ನೃತ್ಯ ದಿನಾಚರಣೆ ಅಂಗವಾಗಿ ಮೇ.29, 30 ರಂದು ಹೈದರಾಬಾದಿನ ಜಯಚಂದ್ರನ್ ಅವರಿಂದ ನೃತ್ಯ ಕಾರ್ಯಾಗಾರ ನಡೆಸಲಾಗುವುದು. ಅಲ್ಲದೇ ಮೇಕಪ್, ಮುಖ ಭಾವನೆ ತೋರ್ಪಡಿಕೆ ಬಗ್ಗೆಯೂ ವಿಶೇಷ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು. ಭರತನಾಟ್ಯ ಕಲಾವಿದರಾದ ಶ್ರೀಧರ್ ಜೈನ್, ನಿವೇದಿತಾ, ಅನುರಾಧ ಪ್ರಕಾಶ್, ಶಾಶ್ವತಿ, ಶ್ರೀಲಕ್ಷ್ಮೀ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ: ಕೆ.ಎಂ.ಆರ್)

Leave a Reply

comments

Related Articles

error: