ಕರ್ನಾಟಕ

ನಿಂತ ಲಾರಿಗೆ ಮಿನಿ ವ್ಯಾನ್ ಢಿಕ್ಕಿ: 10 ಮಂದಿ ಸಾವು

ಲಖಿಂಪುರ, ಏ.28: ಉತ್ತರ ಪ್ರದೇಶದ ಲಖೀಂಪುರ ಖೇರಿ ಎಂಬಲ್ಲಿ ನಿಂತಿದ್ದ ಲಾರಿಗೆ ಮಿನಿ ವ್ಯಾನ್ ವೊಂದು ಡಿಕ್ಕಿ ಹೊಡೆದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.

ಚಾಲಕನನ್ನು ಅನುಪ್ ಆವಸ್ಥಿ(25) ಎಂದು ಗುರುತಿಸಲಾಗಿದ್ದು, ಶಹಜಹಾನ್ಪುರ್ ದಿಂದ ಸೀತಾಪುರಕ್ಕೆ ತೆರಳುತ್ತಿದ್ದ ವ್ಯಾನ್ ನಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 18 ಮಂದಿ ಪ್ರಯಾಣಿಸುತ್ತಿದ್ದರು. ಲಖಿಂಪುರ ಖೇರಿ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರಕ್ ಅನ್ನು ಗಮನಿಸದ ಮಿನಿ ವ್ಯಾನ್ ಚಾಲಕ ಹಿಂಬದಿಯಿಂದ ಲಾರಿಗೆ ಗುದ್ದಿದ್ದಾನೆ. ಇದರಿಂದ ಚಾಲಕನ್ನೂ ಸೇರಿ 9 ಜನ ಮೃತರಾಗಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ಮೃತರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಇಲ್ಲಿನ ಶಹಜಹಾನ್ ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.(ಪಿ.ಎಸ್ )

Leave a Reply

comments

Related Articles

error: