ಮೈಸೂರು

ವಿಶ್ವವಿದ್ಯಾನಿಲಯಗಳಲ್ಲಿ ಸ್ವಯಂ-ಡಿಜಿಟಲೀಕರಣ ಅಳವಡಿಸಿಕೊಳ್ಳಬೇಕು: ಪ್ರೊ.ಸಿ.ಬಸವರಾಜು

ಮೈಸೂರು,ಏ.28-ವಿದ್ಯಾರ್ಥಿಗಳ ಅನುಕೂಲದ ದೃಷ್ಠಿಯಿಂದ ಹಾಗೂ ಎಲ್ಲರಿಗೂ ಶಿಕ್ಷಣವನ್ನು ಒದಗಿಸಿಕೊಡುವ ಉದ್ದೇಶದಿಂದ ಎಲ್ಲ ವಿಶ್ವವಿದ್ಯಾನಿಲಯಗಳು ಸ್ವಯಂ-ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಸ್ವಯಂ ಡಿಜಿಟಲ್ ಲರ್ನಿಂಗ್ ಮಾನಿಟರಿಂಗ್ ಸೆಲ್ ವತಿಯಿಂದ ಶನಿವಾರ ವಿವಿಯ ವಿಜ್ಞಾನಭವನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿದ್ದ ಯುಜಿಸಿ-ಎಂಒಒಸಿ ಸ್ವಯಂ ಕೋರ್ಸ್ ಗಳ ಅಳವಡಿಕೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮೂಲಭೂತ ಹಕ್ಕು. ಅದು ಎಲ್ಲರಿಗೂ ದೊರಕಬೇಕು ಎಂಬ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಯೋಜನೆ ಅಡಿಯಲ್ಲಿ ಸ್ವಯಂ-ಡಿಜಿಟಲೀಕರಣದ ಮುಖಾಂತರ ಅನೌಪಚಾರಿಕವಾಗಿ ತಾವಿರುವಲ್ಲಿಯೇ ತಮ್ಮ ಆಯ್ಕೆಯ ವಿಷಯವನ್ನು ಕಲಿಯಲು ಅವಕಾಶಮಾಡಿಕೊಡಲಾಗಿದೆ ಎಂದರು.

ಈಗಾಗಲೇ 9ನೇ ತರಗತಿಯಿಂದ ಸ್ನಾತಕೋತ್ತರದ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು  ಕಲೆಹಾಕಲಾಗಿದೆ. ಆರ್ಥಿಕವಾಗಿ ಅಥವಾ ಇತರೆ ಕಾರಣಗಳಿಂದ ಔಪಚಾರಿಕವಾಗಿ ಶಿಕ್ಷಣ ಪಡೆಯಲಾಗದವರಿಗೆ ಸ್ವಯಂ-ಡಿಜಿಟಲಿಕರಣ ಯೋಜನೆಯು ಅನೌಪಚಾರಿಕವಾಗಿ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: