ಮೈಸೂರು

ಕಾರಿನಲ್ಲಿದ್ದ ಸ್ಟೀರಿಯೋ ಕಳುವು

ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನ ಮುಂಭಾಗದ ಗ್ಲಾಸನ್ನು ಕತ್ತರಿಸಿದ ದುಷ್ಕರ್ಮಿಗಳು  ಅದರಲ್ಲಿದ್ದ ಸ್ಟೀರಿಯೋ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರಣ್ಯಪುರಂ ನಿವಾಸಿ ಗುರುದತ್ತ ಎಂಬವರ ಕಾರಿನಲ್ಲಿಯೇ ಈ ಕಳ್ಳತನ ನಡೆದಿದ್ದು, ಗುರುದತ್ತ ಅವರು ತಮ್ಮ ಮನೆಯ ಎದುರು ನವೆಂಬರ್ 30ರಂದು ರಾತ್ರಿ 11.30ರ ಸುಮಾರಿಗೆ ತಮ್ಮ ಸ್ನೇಹಿತನ ಸ್ಕೋಡಾ ಫ್ಯಾಬಿಯಾ ಕಾರನ್ನು ಬೀಗ ಹಾಕಿ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ಕಾರಿನ ಮುಂಭಾಗದ ಎಡಬದಿಯ ಗ್ಲಾಸನ್ನು ಕತ್ತರಿಸಲಾಗಿತ್ತು. ಕೂಡಲೇ ಕಾರಿನ ಬೀಗ ತೆರೆದು ಒಳ ಪ್ರವೇಶಿಸಿ ನೋಡಲಾಗಿ ಕಾರಿನಲ್ಲಿದ್ದ ಟಚ್ ಸ್ಕ್ರೀನ್ ಸಿಸ್ಟಂ, ಕಾರಿನ ಮುಂಭಾಗದ ಸೀಟಿನ ಮೇಲೆ ಇರಿಸಿದ್ದ ರಿದಂಪ್ಯಾಡ್, ರೋಲ್ಯಾಂಡ್ ಎಸ್.ಪಿಡಿ-ಎಕ್ಸ್ 20, ಯಮಹ ಡಿಟಿಎಕ್ಸ್ ಮಲ್ಟಿ-12 ಹಾಗೂ ಇವುಗಳ ಸ್ಟ್ಯಾಂಡ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಪ್ರಕರಣ ಕುರಿತಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

comments

Related Articles

error: