ಕರ್ನಾಟಕ

ರಾಮನಗರ: ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕ

ರಾಮನಗರ,ಏ.29-ಅರ್ಚಕರೊಬ್ಬರು ಆಯತಪ್ಪಿ ಕೊಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಅರ್ಚಕ ವಿಜಯ್ ಕುಮಾರ್ ಕೊಂಡಕ್ಕೆ ಬಿದ್ದು ಗಾಯಗೊಂಡಿರುವವರು. ಗ್ರಾಮದ ರೇವಣಸಿದ್ದೇಶ್ವರ ಸ್ವಾಮಿಯ ಕೊಂಡೋತ್ಸವದಲ್ಲಿ ಘಟನೆ ನಡೆದಿದೆ. ವಿಜಯ್ ಕುಮಾರ್ ರಕ್ಷಿಸಲು ಹೋದ ಇನ್ನಿಬ್ಬರು ಅರ್ಚಕರಾದ ರುದ್ರೇಶ್ ಮತ್ತು ಮಂಜುನಾಥ್ ಅವರಿಗೂ ಕೂಡ ಗಾಯವಾಗಿದೆ. ಗಾಯಗೊಂಡಿರುವ ಮೂವರು ಅರ್ಚಕರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: