ಪ್ರಮುಖ ಸುದ್ದಿಮೈಸೂರು

ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂಬುದು ಜನರ ತೀರ್ಮಾನ: ಎಚ್.ಡಿ.ದೇವೇಗೌಡ

ಮೈಸೂರು,ಏ.29-ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ನಮ್ಮ ಪಕ್ಷ ಜಾತ್ಯಾತೀತ ಪಕ್ಷ. ಆದರೆ ಈ ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಅಂತ ಜನ ತೀರ್ಮಾನ ಮಾಡುತ್ತಾರೆ. ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುವ ವಿಚಾರವಾಗಿ ಮಾತನಾಡುತ್ತಾ, ಕುಮಾರಸ್ವಾಮಿ ಒಂದು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಸೇರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೂನಿಯರ್ ದೇವೇಗೌಡ ನೇ ಒಳ್ಳೆ ಪೈಳ್ವಾನ್. ಎದುರಾಳಿ ಸೋಲಿಸಲು ಜಿಟಿಡಿನೇ ಸಾಕು. ಜಿ.ಡಿ.ದೇವೆಗೌಡ ಪರ ಪ್ರಚಾರ ಮಾಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದು ಸಿದ್ದರಾಮಯ್ಯರಿಗೆ ಕಷ್ಟ ಇದೆ. ಹೀಗಾಗಿ ಬದಾಮಿಗೆ ಹೋಗಿದ್ದಾರೆ. ಯಾಕೆ ಕಷ್ಟ ಇದೆ ಅಂದರೆ ನುಡಿದಂತೆ ನಡೆದಿದ್ದೆವೆ ಅಂತಾರೆ. ಅವರು ಎಷ್ಟು ಕೆಟ್ಟ ಆಡಳಿತ ಕೊಟ್ಟಿದ್ದಾರೆ ಅನ್ನೊದಕ್ಕೆ ನನ್ನ ಬಳಿ ಉದಾಹರಣೆಗಳಿವೆ ಎಂದರು.

ಐಟಿ ರೈಡ್ ಗೂ ಚುನಾವಣೆಗೂ ಸಂಬಂಧ ಇಲ್ಲ.  ಅವರ ಕೆಲಸ ಅವರು ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಗೆ ಈಗ ಇನ್ನಿಲ್ಲದ ಪ್ರೀತಿ ಬಂದಿದೆ. ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿ ನಮ್ಮನ್ನು ಮುಸ್ಲಿಂ ವಿರೋಧಿಗಳು ಅಂತಾ ಬಿಂಬಿಸಲಾಗ್ತಿದೆ. ದತ್ತಪೀಠ ಗಲಾಟೆ ಈದ್ಗಾ ಮೈದಾನ ವಿವಾದ ಯಾವಾಗ ಆಗಿದ್ದು? ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಟಿ.ಚಂದ್ರೆಗೌಡ ಕಾನೂನು ಸಚಿವರಾಗಿದ್ದಾಗ ದತ್ತಪೀಠದಲ್ಲಿ ಹೋಮ ಹವನ ಮಾಡಿರಲಿಲ್ಲವೇ? 1983 ರಲ್ಲಿ ಸಿದ್ದರಾಮಯ್ಯ ಎಲ್ಲಿ ಇದ್ದರು? ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದ ಸಿದ್ದು. ನಿಮ್ಮನ್ನ ಲೀಪ್ಟ್ ಮಾಡಿದ್ದು ಯಾರು ? ಎಂದು ಪ್ರಶ್ನಿಸಿದರು.

ನಿಮ್ಮಪ್ಪನ್ನ ಆಣೆ ನೀವೂ ಅಧಿಕಾರಕ್ಕೆ ಬರೋಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನೂ ಅವರನ್ನು ಪ್ರೀತಿಯಿಂದ ಸಿದ್ದರಾಮು ಎಂದು ಕರೆದಿದ್ದಕ್ಕೆ. ಈಗ ಅವರು ಕೊಡುತ್ತಿರುವ ಬೆಲೆ ಇದು ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದೀಗಾ ಆಣೆ ಕಾಲ ಹೋಯ್ತು. ಇದೀಗಾ ಏನಿದ್ರು ನೋಟ್ ಕಾಲ. ಸಿಎಂಗೆ ಟಾಂಗ್ ನೀಡಿ ಕುಹುಕ ನಗೆ ಬೀರಿದರು ದೇವೇಗೌಡರು. ಅಂಬರೀಶ್ ಅವರನ್ನ ರಾಜಕೀಯಕ್ಕೆ ತಂದವನೇ ನಾನು. ಅವರು ಕಾವೇರಿ ಹೋರಾಟದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೇ ಕೊಟ್ಟಿದ್ದರು. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದ ತಕ್ಷಣ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಾ? ಎಂದು ಪ್ರಶ್ನಿಸಿದರು.

ನಮ್ಮಪ್ಪ ಗೌಡ ಅಂತ ಹೆಸರಿಟ್ಟರು ಅಷ್ಟೇ. ನಾನೂ ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ.? ಹಿಂದಿನ ಜನ್ಮದ ಪಾಪಾದ ಫಲವಾಗಿ ಈಗ ನನಗೆ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ಈ‌ ಜನ್ಮದಲ್ಲಿ ನಾನೂ ಯಾವ ಪಾಪಾವನ್ನು ಮಾಡಿಲ್ಲ. ಈಗ ಅನುಭವಿಸುತ್ತಿರುವುದು ಈ ಹಿಂದಿನ ಪ್ರಾರಬ್ಧ.  ನನ್ನ ಹುಟ್ಟುಹಬ್ಬಕ್ಕೆ ರಾಜ್ಯದ ಜನ ಏನೂ ಉಡುಗೊರೆ ಕೊಡಿತ್ತಾರೆಂಬುದು ದೈವ ಲಿಖಿತ. ನೀವೂ ಅವತ್ತೆ ಕಾದು ನೋಡಿ.

ರಾಹುಲ್ ಗಾಂದಿ ಪ್ರಧಾನಿ ಆಗೋದಾದ್ರೆ ಆಗಲಿ. ಈ ದೇಶದ ಜನ ತಿರ್ಮಾನ ಮಾಡ್ತಾರೆ. ಬಹುಮತ ಬರಬಹುದು ಅಥವಾ ಬರದೇ ಇರಬಹುದು. ಆದರೆ ನಾವು ಸರ್ಕಾರ ಮಾಡುತ್ತೇವೆ. ನಾವು ಅಧಿಕಾರ ಮಾಡ್ತೇವೆ. ಕಾಂಗ್ರೆಸ್, ಬಿಜೆಪಿ ಬಿಟ್ಟು ಅಧಿಕಾರ ಮಾಡ್ತೇವೆ. ಕಾಂಗ್ರೆಸ್ ಬಿಜೆಪಿಗಿಂತಲೂ ಹೆಚ್ಚಿನ ಸೀಟು ನಮಗೆ ಬರುತ್ತೆ. ಅಂತ ಮಾತ್ರ ಹೇಳ್ತಿನಿ. ನಾಲ್ಕಾಣಿ ಏಜೆನ್ಸಿಗಳಿದ್ದಾರೆ. ಆ ಬಗ್ಗೆ ನಾನೂ ತಲೆ ಕೆಡಿಸಿಕೊಳ್ಳೊದಿಲ್ಲ‌. 38, 36, 40 ಸೀಟ್ ಬರತ್ತೆ ಅಂತಾರೆ.  ಅದರ  ಬಗ್ಗೆ ಹೆಚ್ಚಿನ ಮಾತಾಡುವುದಿಲ್ಲ ಎಂದು ಹೇಳಿದರು.(ಕೆ.ಎಸ್, ಎಂ.ಎನ್)

Leave a Reply

comments

Related Articles

error: