
ಈಚೆಗೆ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನಡೆದ ದುರಂತದಲ್ಲಿ ದುರ್ಮರಣವನ್ನಪ್ಪಿದ್ದ ಸಾಹಸ ಕಲಾವಿದರಾದ ಉದಯ್ ಹಾಗೂ ಅನಿಲ್ ಅವರ ಕುಟುಂಬಗಳಿಗೆ ಸಂಸದ ರಾಜೀವ್ ಚಂದ್ರಶೇಖರ್ ಪರಿಹಾರ್ಥ 5 ಲಕ್ಷ ರೂಪಾಯಿ ಸಹಾಯಧನ ವಿತರಿಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಉದಯ ತಂದೆ –ವೆಂಕಟೇಶ್ಗೆ ಹಾಗೂ ಅನಿಲ್ ಸಹೋದರ ಶ್ರೀಕಾಂತ್ಗೆ ರಾಜೀವ್ ಚಂದ್ರಶೇಖರ್ ಪರವಾಗಿ ಏಷ್ಯಾನೆಟ್ ಸಂಸ್ಥೆ ಕಾರ್ಯಕಾರಿ ನಿರ್ದೇಶಕ ಸಂಜಯ್ ಪ್ರಭು ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಷ್ ಉಪಸ್ಥಿತರಿದ್ದರು. ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಲಿಕಾಪ್ಟರ್ ಮೂಲಕ ಕ್ಲೈಮ್ಯಾಕ್ಸ್ ಸಾಹಸಮಯ ದೃಶ್ಯಾವಳಿಯ ಚಿತ್ರೀಕರಣದಲ್ಲಿ ದುರಂತ ಅಂತ್ಯ ಕಂಡ ಸಾಹಸ ಕಲಾವಿದರಿಗೆ ಚಿತ್ರೋದ್ಯಮದಿಂದಲೂ ಸಹಾಯ ಮಾಡಲಾಗುವುದು ಎಂದು ಅಂಬರೀಷ್ ತಿಳಿಸಿ, ರಾಜೀವ್ ಚಂದ್ರಶೇಖರ್ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
ಈ ಸಂದರ್ಭ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಕಲಾವಿದರ ಸಂಘದ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಇದ್ದರು.