ಪ್ರಮುಖ ಸುದ್ದಿ

ಇಂದು ವೆಬ್ ಸೈಟ್ ಗಳಲ್ಲಿ ಪಿಯು ಫಲಿತಾಂಶ ಲಭ್ಯ

ರಾಜ್ಯ(ಬೆಂಗಳೂರು)ಏ.30:- ರಾಜ್ಯಾದ್ಯಂತ 2,817 ಪರೀಕ್ಷಾ ಕೇಂದ್ರಗಳಲ್ಲಿ ಮಾ.1ರಿಂದ 17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ವೆಬ್ ಸೈಟ್ ಗಳಲ್ಲಿ ಪ್ರಕಟಗೊಳ್ಳಲಿದೆ.  ಇಂದು ಬೆಳಿಗ್ಗೆ 11ರಿಂದ ಇಲಾಖಾ ವೆಬ್ ಸೈಟ್ www.puc.kar.nic.in ಮತ್ತು http://karresults.nic.in  ಫಲಿತಾಂಶ ಪ್ರಕಟವಾಗಲಿದ್ದು, ಮೇ.1ಕ್ಕೆ ಎಲ್ಲಾ ಕಾಲೇಜುಗಳಲ್ಲಿಯೂ ಪ್ರಕಟವಾಗಲಿದೆ. ಈ ಬಾರಿ 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆಂದು ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿದೆ. ಫಲಿತಾಂಶ ಪ್ರಕಟಗೊಂಡ ಬಳಿಕ ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯ ಮಾಪನಕ್ಕಾಗಿ ಆನ್ ಲೈನ್ ಮೂಲಕವೇ ಅರ್ಜಿಸಲ್ಲಿಸಬಹುದು. ಮೇ. ತಿಂಗಳ ಕೊನೆಯಲ್ಲಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಮಾಹಿತಿ ನೀಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: