
ದೇಶ
ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿರ್ಮಲ್ ಸಿಂಗ್ ರಾಜೀನಾಮೆ
ಶ್ರೀನಗರ,ಏ.30-ಜಮ್ಮು-ಕಾಶ್ಮೀರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿರ್ಮಲ್ ಸಿಂಗ್ ಭಾನುವಾರ (ಏ.29) ರಂದು ರಾಜೀನಾಮೆ ನೀಡಿದ್ದಾರೆ.
ನಿರ್ಮಲ್ ಸಿಂಗ್ ರಾಜೀನಾಮೆಯ ನಂತರ ಬಿಜೆಪಿ ಮುಖಂಡ ಕವಿಂದರ್ ಗುಪ್ತ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರ ಸರ್ಕಾರದ ಮಂತ್ರಿ ಮಂಡಲವನ್ನು ಸಂಪೂರ್ಣ ಬದಲಾಯಿಸುತ್ತಿರುವ ಕಾರಣಕ್ಕೆ ಏ.17 ರಂದು ಬಿಜೆಪಿಯ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದರು. ಕಥುವಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಕುರಿತು ದೇಶದಾದ್ಯಂತ ಆಕ್ರೋಶ ಎದ್ದ ನಂತರ ನಡೆದಿದ್ದ ಈ ಬೆಳವಣಿಗೆ ಜಮ್ಮು -ಕಾಶ್ಮೀರದ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಮತ್ತು ಬಿಜೆಪಿ ನಡುವೆ ಬಿರುಕು ಮೂಡುತ್ತಿದೆ ಎಂಬ ಅನುಮಾನ ಹುಟ್ಟಿಸಿತ್ತು.
ಆದರೆ ಬಿಜೆಪಿ ವರಿಷ್ಠರು ಸಚಿವ ಸಂಪುಟ ಪುನಾರಚನೆಗಷ್ಟೇ ಇಲ್ಲಿನ ಎಲ್ಲ ಸಚಿವರ ಬಳಿ ಸಾಮೂಹಿಕ ರಾಜೀನಾಮೆ ಕೇಳಿದ್ದೇವೆ ವಿನಃ ಇದರ ಹಿಂದೆ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. (ಎಂ.ಎನ್)